ಭಾನುವಾರ, ಫೆಬ್ರವರಿ 20, 2011

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

                                                         ವಿಜಯ ಕರ್ನಾಟಕ, 13 ಫೆಬ್ರವರಿ 2011

ನಾಲ್ಕನೇ ಪ್ರಕಟಣೆ - ಕಿಲಕಿಲ

ನಗು ಅಪರೂಪ ಎನ್ನುವುದು ಎಲ್ಲರ ಕಂಪ್ಲೇಂಟ್. ಆದರೆ ನಗುವಿಗಾಗಿ ಏನು ಮಾಡಬೇಕು? ಇದು ತುಂಬಾ ಜನರಿಗೆ ಗೊತ್ತಿಲ್ಲ. ಆದ್ದರಿಂದಲೇ ನಗಾಡುವವರ ಸಂಖ್ಯೆ ಇಂದಿನ ಯಾಂತ್ರಿಕ ಯುಗದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಗುವಿಲ್ಲದ ಒತ್ತಡದ ಜೀವನ ದೈಹಿಕ ಆರೋಗ್ಯವನ್ನು ಮಾತ್ರ ಕೆಡಿಸುವುದಲ್ಲದೇ, ಮಾನಸಿಕವಾಗಿಯೂ ಕುಗ್ಗಿಸುತ್ತಿದೆ. ಇಂತಹ ಯಾಂತ್ರಿಕ ಬದುಕಿಗೆ ನಗುವಿನ ಕಿಕ್ ನೀಡಲು ರೂಪುಗೊಂಡಿರುವುದೇ ಈ 'ಕಿಲಕಿಲ' ಪುಸ್ತಕ. ಇತ್ತೀಚಿನ ಫ್ರೆಶ್ ಅನ್ನಿಸುವ ಮುನ್ನೂರಕ್ಕೂ ಹೆಚ್ಚು ನಗೆಹನಿಗಳನ್ನು ಒಳಗೊಂಡಿರುವ ಈ ಪುಸ್ತಕದ ಮೊದಲ ಮುದ್ರಣದ ಪ್ರತಿಗಳು ಈಗಾಗಲೇ ಖಾಲಿಯಾಗಿದ್ದು, ಎರಡನೇ ಮುದ್ರಣಕ್ಕೆ ಅಣಿಗೊಳ್ಳುತ್ತಿದೆ. 52 ಪುಟಗಳ ಈ ಜೋಕ್ಸ್ ಪುಸ್ತಕವನ್ನು ಶಿವಕುಮಾರ‍್ .ವೈ ಸಂಗ್ರಹಿಸಿದ್ದು, ಪುಸ್ತಕದ ಬೆಲೆ 25 ರೂಪಾಯಿಗಳು.

ಮೂರನೇ ಪ್ರಕಟಣೆ -ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು...!!

ಎಲ್ಲರ ವ್ಯಕ್ತಿತ್ವವೂ ಒಂದೇ ರೀತಿ ಇರುವುದಿಲ್ಲ. ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಹೇಗೆ ವಿಭಿನ್ನತೆ ಇರುತ್ತದೋ, ಹಾಗೇ ಒಂದು ವ್ಯಕ್ತಿತ್ವದಿಂದ ಇನ್ನೊಂದು ವ್ಯಕ್ತಿತ್ವಕ್ಕೆ ಅಷ್ಟೇ ವ್ಯತ್ಯಾಸವಿರುತ್ತದೆ. ಅಂದರೆ ಒಬ್ಬೊಬ್ಬರು ಒಂದೊಂದು ಸಂದರ್ಭಕ್ಕೆ ಒಂದೊಂದು ರೀತಿ ರಿಯಾಕ್ಟ್ ಮಾಡುತ್ತಿರುತ್ತಾರೆ. ಹೀಗೆ ನಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಗಳನ್ನು, ನಮ್ಮ ಮನಸ್ಸು ಯೋಚಿಸುವ ರೀತಿಯನ್ನು, ಬೇರೊಂದ ವ್ಯಕ್ತಿತ್ವದಿಂದ ನಾವು ಕಲಿಯಬೇಕಾದ್ದನ್ನು ಹತ್ತು ಹಲವು ಲೇಖನಗಳ ಮೂಲಕ ಹಿಡಿದಿಟ್ಟಿರುವ ಪುಸ್ತಕ 'ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು!' ಸಾಫ್ಟವೇರ‍್ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬದುಕು ಕಂಡುಕೊಂಡಿರುವ ಪಿ.ಶ್ರೀಕಾಂತ್ ಬೆಟ್ಟಗದ್ದೆಯವರು ಪತ್ರಿಕೆಗೆ ಬರೆದ ಲೇಖನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ನೀಡಲಾಗಿದೆ. 112 ಪುಟಗಳಲ್ಲಿ ಮುದ್ರಣಗೊಂಡಿರುವ ಈ ಪುಸ್ತಕದ ಬೆಲೆ 60 ರೂಪಾಯಿಗಳು. ನಮ್ಮ ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರು ಅತ್ಯಗತ್ಯವಾಗಿ ಓದಲೇಬೇಕಾದ ಪುಸ್ತಕ ಇದೆಂದರೆ ತಪ್ಪಲ್ಲ.

ಎರಡನೇ ಪ್ರಕಟಣೆ - ನೀವೂ ಚೆಲುವೆಯರಾಗಿ...

ನಾನು ಚೆಂದ ಕಾಣಿಸಬೇಕು ಎನ್ನುವ ಬಯಕೆ ಹೆಣ್ಣುಮಕ್ಕಳಲ್ಲಿ ಸಹಜವಾಗಿರುತ್ತದೆ. ಆದರೆ ಚೆಂದ ಕಾಣಿಸುವುದು ಹೇಗೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇದೇ ಕಾರಣದಿಂದಾಗಿ ಚೆಲುವು ಎನ್ನುವುದು ಕೆಲವರಿಗೆ ಕನ್ನಡಿಯೊಳಗಿನ ಗಂಟಾಗಿರುತ್ತದೆ. ಹೆಣ್ಣುಮಕ್ಕಳ ಈ ಸೌಂದರ್ಯಪ್ರಜ್ಞೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಪುಸ್ತಕ 'ನೀವೂ ಚೆಲುವೆಯರಾಗಿ...' ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆ.ಪ್ರತಿಮಾ ಕೋಡೂರು ಅವರು ಉದಯವಾಣಿ, ಪ್ರಜಾವಾಣಿ, ಕರ್ಮವೀರ ಮತ್ತು ಪ್ರಿಯಾಂಕ ಪತ್ರಿಕೆಗಳಲ್ಲಿ ಈ ಮೊದಲು ಬರೆದ ಸೌಂದರ್ಯ ಸಲಹೆಗಳನ್ನು ಒಟ್ಟುಗೂಡಿಸಿ ಈ ಪುಸ್ತಕದಲ್ಲಿ ನೀಡಲಾಗಿದೆ. 52 ಪುಟಗಳಲ್ಲಿ ಮುದ್ರಣಗೊಂಡಿರುವ ಈ ಪುಸ್ತಕದ ಬೆಲೆ 25 ರೂಪಾಯಿಗಳು.

ಮೊದಲನೇ ಪ್ರಕಟಣೆ - ನಾವರಿಯದ ನಮ್ಮದೇ ಜಗತ್ತು

ಎಷ್ಟೋ ಸಂಗತಿಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿರುತ್ತದೆ. ಆದರೆ ಅದು ಯಾಕೆ ನಡೆಯುತ್ತಿದೆ ಎನ್ನುವುದು ನಮಗೇ ಗೊತ್ತಿರುವುದಿಲ್ಲ. ಹಾಗೆಂದು ಅದನ್ನು ತಿಳಿದುಕೊಳ್ಳದೇ ಇರಲೂ ಸಾಧ್ಯವಿಲ್ಲ. ಯಾವಾಗಲೂ ನಮ್ಮಲ್ಲಿ ಕುತೂಹಲ ಕೆರಳಬಹುದು, ಅಥವಾ ನಮ್ಮ ಅಕ್ಕಪಕ್ಕದ ಯಾರಲ್ಲಿಯೋ ಈ ಬಗ್ಗೆ ಪ್ರಶ್ನೆಗಳೇಳಬಹುದು. ಆದರೆ ಅದಕ್ಕೆ ಉತ್ತರ? ಅದು ನಮಗೆ ಗೊತ್ತಿರುವುದಿಲ್ಲ. ಯಾಕೆಂದರೆ ಅದರ ಬಗ್ಗೆ ನಾವು ಯೋಚಿಸಲು ಹೋಗಿರುವುದಿಲ್ಲ. ಕತ್ತಲ ಕೋಣೆಯಲ್ಲಿ ಟಿ.ವಿ ನೋಡುವುದರಿಂದ ಏನಾಗುತ್ತದೆ? ಹೃದಯಾಘಾತ ಕೆಲವರಿಗೆ ಮಾತ್ರ ಯಾಕಾಗುತ್ತದೆ?.... ಹೀಗೆ ನಮ್ಮ ನಡುವಿನ ಸರಳ ಅನ್ನಿಸುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ 'ನಾವರಿಯದ ನಮ್ಮದೇ ಜಗತ್ತು' ಪುಸ್ತಕ. ಸುಮಾರು 300  ಇಂತಹ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಂದ ಆರಂಭಿಸಿ ಎಲ್ಲಾ ವಯೋಮಾನದವರೂ ಓದುವಂತಿರುವ 120 ಪುಟಗಳ ಈ ಪುಸ್ತಕದ ಬೆಲೆ 75 ರೂಪಾಯಿಗಳು. 

ಶನಿವಾರ, ಫೆಬ್ರವರಿ 19, 2011

ನಮ್ಮ ಪುಸ್ತಕಗಳು ಇಲ್ಲಿ ದೊರೆಯುತ್ತದೆ -

ನಮ್ಮ ಬುಕ್ಸ್ ಬ್ಯಾಂಕಿನ ಪುಸ್ತಕಗಳ ಅಧಿಕೃತ ಮಾರಾಟಗಾರರು : 

ಜಯರಾಮ ಪ್ರಕಾಶನ, ನಂ. 12/1, ಗಂಧದ ಗುಡಿ ರಸ್ತೆ, ಸುಂಕೇನಹಳ್ಳಿ, ಹನುಮಂತನಗರ, ಬೆಂಗಳೂರು - 560 019, ಮೊಬೈಲ್ : 99459 65672

ಮತ್ತು

ಗಹನಾ ಬುಕ್ಸ್ ಲಿಂಕ್ಸ್, 101, ಗನ್ನಪ್ಪ ಗಾರ್ಡನ್, ೮ನೇ ತಿರುವು, ಮಲ್ಲೇಶ್ವರಂ, ಬೆಂಗಳೂರು - 560 003, ಇ-ಮೇಲ್ : gahanaabookslinks@gmail.com, ಮೊಬೈಲ್ : 97433 06426

ನಮ್ಮ ಪುಸ್ತಕಗಳು ಬೆಂಗಳೂರಿನ ಸಪ್ನ ಬುಕ್ ಹೌಸ್, ಅಂಕಿತ ಪುಸ್ತಕ, ಸಾಹಿತ್ಯ ಭಂಡಾರ, ಸುಮುಖ ಪ್ರಕಾಶನ, ಸ್ನೇಹ ಬುಕ್ ಹೌಸ್, ನವಭಾರತ್, ಆವಿ ಪುಸ್ತಕ ಮನೆ, ಗೀತಾ ಏಜೆನ್ಸೀಸ್ ಮತ್ತು ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ.  ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ, ಎನ್.ಬಿ.ರೋಡಗಿ - ಜತನಿ ಬುಕ್ ಸ್ಟಾಲ್ ಕೊಪ್ಪಳ (95916 79149),  ಕಿತ್ತೂರು ಪೇಪರ‍್ ಏಜೆನ್ಸಿ -ಗೋಕಾಕ್, ಬೆಂಗಳೂರಿನ ಮೆಜೆಸ್ಟಿಕ್ ಆಸುಪಾಸಿನ ಪತ್ರಿಕೆ ಮಾರಾಟದ ಸ್ಟಾಲ್ ಗಳಲ್ಲಿಯೂ ನಮ್ಮ ಪುಸ್ತಕಗಳು ಲಭ್ಯವಿರುತ್ತದೆ.