ಭಾನುವಾರ, ಫೆಬ್ರವರಿ 20, 2011

ಮೂರನೇ ಪ್ರಕಟಣೆ -ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು...!!

ಎಲ್ಲರ ವ್ಯಕ್ತಿತ್ವವೂ ಒಂದೇ ರೀತಿ ಇರುವುದಿಲ್ಲ. ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ಹೇಗೆ ವಿಭಿನ್ನತೆ ಇರುತ್ತದೋ, ಹಾಗೇ ಒಂದು ವ್ಯಕ್ತಿತ್ವದಿಂದ ಇನ್ನೊಂದು ವ್ಯಕ್ತಿತ್ವಕ್ಕೆ ಅಷ್ಟೇ ವ್ಯತ್ಯಾಸವಿರುತ್ತದೆ. ಅಂದರೆ ಒಬ್ಬೊಬ್ಬರು ಒಂದೊಂದು ಸಂದರ್ಭಕ್ಕೆ ಒಂದೊಂದು ರೀತಿ ರಿಯಾಕ್ಟ್ ಮಾಡುತ್ತಿರುತ್ತಾರೆ. ಹೀಗೆ ನಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಗಳನ್ನು, ನಮ್ಮ ಮನಸ್ಸು ಯೋಚಿಸುವ ರೀತಿಯನ್ನು, ಬೇರೊಂದ ವ್ಯಕ್ತಿತ್ವದಿಂದ ನಾವು ಕಲಿಯಬೇಕಾದ್ದನ್ನು ಹತ್ತು ಹಲವು ಲೇಖನಗಳ ಮೂಲಕ ಹಿಡಿದಿಟ್ಟಿರುವ ಪುಸ್ತಕ 'ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು!' ಸಾಫ್ಟವೇರ‍್ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬದುಕು ಕಂಡುಕೊಂಡಿರುವ ಪಿ.ಶ್ರೀಕಾಂತ್ ಬೆಟ್ಟಗದ್ದೆಯವರು ಪತ್ರಿಕೆಗೆ ಬರೆದ ಲೇಖನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ನೀಡಲಾಗಿದೆ. 112 ಪುಟಗಳಲ್ಲಿ ಮುದ್ರಣಗೊಂಡಿರುವ ಈ ಪುಸ್ತಕದ ಬೆಲೆ 60 ರೂಪಾಯಿಗಳು. ನಮ್ಮ ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರು ಅತ್ಯಗತ್ಯವಾಗಿ ಓದಲೇಬೇಕಾದ ಪುಸ್ತಕ ಇದೆಂದರೆ ತಪ್ಪಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ