ಶುಕ್ರವಾರ, ಡಿಸೆಂಬರ್ 30, 2011

ಎರಡು ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ

   ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಡೆಸುವ 'ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು - 56'’ರಲ್ಲಿ, ನಮ್ಮ ಬುಕ್ಸ್ ಬ್ಯಾಂಕಿನಿಂದ ಪ್ರಕಟಿಸಲ್ಪಟ್ಟಿರುವ ಎ.ಬಿ.ಪಾಟೀಲ ಅವರ 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಹಾಗೂ ಎಂ.ಎಸ್.ಧರ್ಮೆಂದ್ರ ಅವರ 'ಹೆಸರೇನಿಡಲಿ?!' ಪುಸ್ತಕ ಬಿಡುಗಡೆ ಸಮಾರಂಭ 2012ರ ಜನವರಿ 1 ನೇ ತಾರೀಖಿನ ಭಾನುವಾರದಂದು ಚಾಮರಾಜಪೇಟೆ ಒಂದನೇ ಮುಖ್ಯರಸ್ತೆಯ ಪ್ರಕಾಶ ಕೆಫೆ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಪುಂಡಲಿಕ ಹಾಲಂಬಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೈಗಾರಿಕಾ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪ್ರಭಾಕರ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಸಾಹಿತಿಗಳಾದ ಕೆ.ಜಿ.ಶಾಂತಯ್ಯನವರು ಈ ಎರಡು ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ. ನಮ್ಮ ಬುಕ್ಸ್ ಬ್ಯಾಂಕಿನ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಕೆ.ಗಣೇಶಕೋಡೂರು ಅವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಮಾರಂಭಕ್ಕೆ ಮೊದಲು ಲಘು ಉಪಾಹಾರದ ವ್ಯವಸ್ಥೆ ಇದೆ. 

ಬುಕ್ಸ್ ಬ್ಯಾಂಕಿನಿಂದ ನಾಲ್ಕು ಹೊಸ ಪುಸ್ತಕಗಳು

ಹೊಸ ಹಾಗೂ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯನ್ನಿಟ್ಟುಕೊಂಡೇ ಪುಸ್ತಕ ಪ್ರಕಟಣೆ ಆರಂಭಿಸಿದ ಬೆನಕ ಬುಕ್ಸ್ ಬ್ಯಾಂಕ್, ಈಗ ನಾಲ್ಕು ಹೊಸ ಪುಸ್ತಕಗಳನ್ನು ಒಂದೇ ಬಾರಿಗೆ ಓದುಗರ ಕೈಗಿಟ್ಟಿದೆ. ಬೆಂಗಳೂರಿನ ಸಪ್ನ ಬುಕ್ ಮಾಲ್ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲೂ ಈ ನಾಲ್ಕು ಪುಸ್ತಕಗಳು ದೊರೆಯುತ್ತವೆ.






ಶುಕ್ರವಾರ, ಡಿಸೆಂಬರ್ 9, 2011

78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಕ್ಸ್ ಬ್ಯಾಂಕಿನ ಮಳಿಗೆ ನಂ. 150

ಗಂಗಾವತಿಯಲ್ಲಿ ನಡೆಯುತ್ತಿರುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕ ಮಳಿಗೆಯನ್ನು ತೆರೆದಿದ್ದು, ನಮ್ಮ ಮಳಿಗೆ ಸಂಖ್ಯೆ.150. ಇಲ್ಲಿ ಬುಕ್ಸ್ ಬ್ಯಾಂಕಿನ ಎಲ್ಲಾ ಪುಸ್ತಕಗಳು ವಿಶೇಷ ರಿಯಾಯತಿ ದರದಲ್ಲಿ ದೊರೆಯುತ್ತಿದ್ದು, ಇತರ ಪ್ರಕಾಶಕರ ಪುಸ್ತಕಗಳೂ ದೊರೆಯುತ್ತವೆ. ಸಮ್ಮೇಳನಕ್ಕೆ ಹೋದಾಗ, ನಮ್ಮ ಮಳಿಗೆಗೂ ಒಮ್ಮೆ ಭೇಟಿ ಕೊಡಿ.





ಶುಕ್ರವಾರ, ನವೆಂಬರ್ 18, 2011

ಈಗ flipkart.comನಲ್ಲಿ ನಮ್ಮ ಬೆನಕ ಬುಕ್ಸ್ ಬ್ಯಾಂಕ್ ಪುಸ್ತಕಗಳ ಮಾರಾಟ

ಪುಸ್ತಕಗಳ ಆನ್ಲೈನ್ ಮಾರಾಟದಲ್ಲಿ ನಂಬರ‍್ ಒನ್ ಸ್ಥಾನ ಗಳಿಸಿರುವ ಫ್ಲಿಪ್ ಕಾರ್ಟ್ ಡಾಟ್ ಕಾಮ್ (flipkart.com)ನ್ನು ಈಗ ನಮ್ಮ ಬೆನಕ ಬುಕ್ಸ್ ಬ್ಯಾಂಕ್ ಕೂಡಾ ಪ್ರವೇಶಿಸಿದೆ. ಅಂದರೆ ಇನ್ನುಮುಂದೆ ನಿಮಗೆ ನಮ್ಮ ಪುಸ್ತಕಗಳು ಬೇಕಾದರೆ ನೀವು ಫ್ಲಿಪ್ ಕಾರ್ಟ್ ಡಾಟ್ ಕಾಮ್ ಗೆ ಲಾಗ್ ಇನ್ ಆಗಿ, ನಮ್ಮ ಪುಸ್ತಕಗಳನ್ನು ಖರೀದಿಗೆ ಆಯ್ಕೆ ಮಾಡಿಕೊಂಡರೆ, ಅವರು ನಿಮಗೆ ನಮ್ಮ ಪುಸ್ತಕಗಳನ್ನು ನಿಮ್ಮ ಮನೆ ಬಾಗಿಲಿಗೇ ತಲುಪಿಸುತ್ತಾರೆ.

ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಈ ಲಿಂಕ್ ನ್ನು ಕ್ಲಿಕ್ ಮಾಡಿ :http://www.flipkart.com/books/rbkd2mzymumnauws?pid=rbkd2mzymumnauws&_l=CJHVEqJO3veuHytbACc9dw--&_r=v1D6kEXeqcY5w7KVuBZZ8Q--&ref=11245350-adc1-4fca-aef4-eeb2c68953d6

ಬೆಂಗಳೂರು ಪುಸ್ತಕೋತ್ಸವ -2011 ರಲ್ಲಿ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕ ಮಳಿಗೆ

ಇಂದಿನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ 'ಬೆಂಗಳೂರು ಪುಸ್ತಕೋತ್ಸವ 2011' ರಲ್ಲಿ ನಮ್ಮ 'ಬೆನಕ ಬುಕ್ಸ್ ಬ್ಯಾಂಕ್' ತನ್ನ ಪುಸ್ತಕ ಮಳಿಗೆಯನ್ನು ತೆರೆದಿದ್ದು, ಇಲ್ಲಿ ನಮ್ಮ ಬುಕ್ಸ್ ಬ್ಯಾಂಕಿನ ಪುಸ್ತಕಗಳಲ್ಲದೇ ಇತರ ಪ್ರಕಾಶಕರ ಪುಸ್ತಕಗಳೂ ವಿಶೇಷ ರಿಯಾಯಿತಿ ದರದಲ್ಲಿ ದೊರೆಯಲಿದೆ. ಪುಸ್ತಕೋತ್ಸವ ಇದೇ ನವೆಂಬರ‍್ 27 ರವರೆಗೆ ನಡೆಯಲಿದೆ. ನಮ್ಮ ಪುಸ್ತಕ ಮಳಿಗೆ ಸಂಖ್ಯೆ - 129






ಆಳ್ವಾಸ್ ನುಡಿಸಿರಿ 2011 ರಲ್ಲಿ ನಮ್ಮ ಬುಕ್ಸ್ ಬ್ಯಾಂಕಿನ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನ











ನಮ್ಮ ಹತ್ತನೇ ಪ್ರಕಟಣೆ - ಮೊಬೈಲ್ ಮ್ಯಾನರ್ಸ್

ಈಗಾಗಲೇ  'ಹೊತ್ತಲ್ಲದ ಹೊತ್ತಿನಲ್ಲಿ...' ಕವನ ಸಂಕಲನವನ್ನು ಪ್ರಕಟಿಸಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ಕವಿ ನೇ.ಸು.ಉದಯಕುಮಾರ ಅವರು ಸಂಪಾದಿಸಿರುವ ಪುಸ್ತಕ 'ಮೊಬೈಲ್ ಮ್ಯಾನರ್ಸ್.'

ಮೊಬೈಲ್ ಬಳಕೆಗಿರಬೇಕಾದ ಇತಿಮಿತಿ ಹಾಗೂ ಅದರ ಬಳಕೆಯಲ್ಲಿರಬೇಕಾದ ಶಿಸ್ತಿನ ಬಗ್ಗೆ ಆತ್ಮೀಯ ಶೈಲಿಯಲ್ಲಿ ಹೇಳುವ ವಿವಿಧ ಲೇಖಕರ ಹನ್ನೆರಡು ಲೇಖನಗಳು ಈ ಸಂಕಲನದಲ್ಲಿದ್ದು, ಈ ಎಲ್ಲಾ ಲೇಖನಗಳೂ 'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಈಗಾಗಲೇ ಪ್ರಕಟಗೊಂಡವುಗಳಾಗಿದೆ. 'ನಿಮ್ದು ಯಾವ ಮಾಡೆಲ್ ಮೊಬೈಲ್,'  'ಪುಟ್ಟ ಮಕ್ಕಳ ಕೈಗೆ ಮೊಬೈಲ್ ಕೊಡಬೇಕಾ?,' 'ಮೊಬೈಲ್ ಮ್ಯಾನರ್ಸ್,' 'ಒಂದು ಮಿಸ್ಡ್ ಕಾಲ್ ಏನೆಲ್ಲ ಮಾಡಿಬಿಡುತ್ತದೆ?', 'ಮೊಬೈಲ್ ರಿಂಗ್ ಟೋನಿನಿಂದ ನಿಮ್ಮ ವ್ಯಕ್ತಿತ್ವ ತಿಳಿಯಬಹುದೇ?' ಸೇರಿದಂತೆ ಮೊಬೈಲ್ ಬಳಕೆಯ ಬಗ್ಗೆ ನಮಗೆ ಗೊತ್ತಿದ್ದೂ ಗೊತ್ತಿಲ್ಲದೇ ಇರುವ ಸಂಗತಿಗಳನ್ನು ಇಲ್ಲಿನ ಲೇಖನಗಳು ನಮಗೆ ಪರಿಚಯಿಸಿಕೊಡುತ್ತವೆ. ಪುಸ್ತಕದಲ್ಲಿರುವ ಎಲ್ಲಾ ಲೇಖನಗಳೂ ಎಲ್ಲೋ ಒಂದು ಕಡೆಯಿಂದ ನಮ್ಮ ವ್ಯಕ್ತಿತ್ವದ ತಿದ್ದುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಪುಸ್ತಕ 60 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 25 ರೂಪಾಯಿ.

ಸೋಮವಾರ, ಸೆಪ್ಟೆಂಬರ್ 5, 2011

ಪುಸ್ತಕ ಪ್ರಪಂಚ - 2011 ರಲ್ಲಿ ಬುಕ್ಸ್ ಬ್ಯಾಂಕಿನ ಮಾರಾಟ ಮಳಿಗೆ

ನಮ್ಮ ಬೆನಕ ಬುಕ್ಸ್ ಬ್ಯಾಂಕಿನ ಮಳಿಗೆಯನ್ನು (ಮಳಿಗೆ ಸಂಖ್ಯೆ - 180)ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುಸ್ತಕ ಪ್ರಪಂಚ - 2011' ರಲ್ಲಿ ತೆರೆಯಲಾಗಿದ್ದು, ನಮ್ಮ ಪುಸ್ತಕಗಳಲ್ಲದೇ ಬೇರೆ ಪ್ರಕಾಶನದ ಪುಸ್ತಕಗಳು ಕೂಡಾ ವಿಶೇಷ ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ಈ ಪುಸ್ತಕ ಪ್ರದರ್ಶನ ಸೆಪ್ಟೆಂಬರ‍್ 11ರ ಭಾನುವಾರದವರೆಗೆ ನಡೆಯಲಿದ್ದು, ನಿಮ್ಮ ಬಿಡುವಿನ ಸಮಯದಲ್ಲಿ ಒಮ್ಮೆ ಭೇಟಿ ಕೊಡಿ.