ಭಾನುವಾರ, ಮೇ 11, 2014

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

ಕನ್ನಡಪ್ರಭ ದಿನಪತ್ರಿಕೆಯ 'ಸಖಿ' ಪುರವಣಿಯ ಕಿರುವಿಮರ್ಶೆಯಲ್ಲಿ ದಿನಾಂಕ 11 ಮೇ 2014ರಂದು ಪ್ರಕಟವಾದ ನಾಗರಾಜ್ ಹವಾಲ್ದಾರ‍್ ಅವರ ರಾಂಗ್ ಶೋ ಮತ್ತು ಇತರ ಕಥೆಗಳು ಪುಸ್ತಕದ ಕಿರು ಪರಿಚಯ.

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

ವಿಜಯಕರ್ನಾಟಕ ದಿನಪತ್ರಿಕೆಯ 'ಸಾಪ್ತಾಹಿಕ ಲವಲವಿಕೆ'ಯ 'ಬುಕ್ಸ್ ರ‍್ಯಾಕ್' ಅಂಕಣದಲ್ಲಿ ದಿನಾಂಕ 4 ಮೇ 2014ರಂದು ಪ್ರಕಟವಾದ ಪ್ರೊ.ಎಂ.ಆರ‍್.ನಾಗರಾಜು ಅವರ 'ಪ್ರಸಂಗಗಳಲ್ಲಿ ವಿಜ್ಞಾನದ ಮೋಜು' ಪುಸ್ತಕದ ಪರಿಚಯ.

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

ಹೊಸದಿಗಂತ ದಿನಪತ್ರಿಕೆಯ 'ಸಾಪ್ತಾಹಿಕ ಸಿರಿ' ಪುರವಣಿಯ 'ಹೊತ್ತಿಗೆ ಹೂರಣ' ಅಂಕಣದಲ್ಲಿ ಪ್ರಕಟವಾದ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕಗಳ ಪರಿಚಯ.

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರದಲ್ಲಿ 7 ಮಾರ್ಚ್ 2014ರಂದು ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಪುಸ್ತಕದ ಪರಿಚಯ

ಶನಿವಾರ, ಫೆಬ್ರವರಿ 15, 2014

www.books.kannada.name ನಲ್ಲಿ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕಗಳು

ಪಿಸುಮಾತು ಬಳಗ ನಿರ್ವಹಿಸುತ್ತಿರುವ www.books.kannada.name ಎನ್ನುವ ಕನ್ನಡ ಪುಸ್ತಕ ಪ್ರಕಾಶಕರು, ಓದುಗರು ಮತ್ತು ಲೇಖಕರನ್ನು ಬೆಸೆಯುವ ವಿನೂತನ ಕಲ್ಪನೆಯ ವೆಬ್ ಸೈಟಿನಲ್ಲಿ ನಮ್ಮ ಬುಕ್ಸ್ ಬ್ಯಾಂಕಿನ ಬಹುತೇಕ ಪುಸ್ತಕಗಳು ಲಭ್ಯವಿದೆ. ನಮ್ಮ ಪುಸ್ತಕಗಳನ್ನು ಖರೀದಿ ಮಾಡುವವರು ಈ ವೆಬ್ ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ಈ ವೆಬ್ ಸೈಟಿನಲ್ಲಿರುವ ನಮ್ಮ ಪ್ರಕಾಶನ ಸಂಸ್ಥೆಯ ಪುಸ್ತಕಗಳ ಪಟ್ಟಿಯನ್ನು ನೋಡಲು ಈ ಮುಂದಿನ ಲಿಂಕ್ ನ್ನು ಕ್ಲಿಕ್ ಮಾಡಿ : http://www.books.kannada.name/index.php?page=user&action=pub_profile&id=4

ಬೆಂಗಳೂರಿನ 'ಸಪ್ನಾ ಬುಕ್ ಮಾಲ್' ಮತ್ತು 'ಚೈತ್ರ ಬುಕ್ ಹೌಸ್'ನಲ್ಲಿ ನಮ್ಮ ಬುಕ್ಸ್ ಬ್ಯಾಂಕಿನ 'ಬೆಳಗುವ ಮೊದಲೇ ನಂದಿಹೋದ ನಂದಾದೀಪಗಳು' ಪುಸ್ತಕದ ಪ್ರಚಾರಕ್ಕಾಗಿ ಮಾಡಿಸಿದ ಪೋಸ್ಟರ‍್






ಶುಕ್ರವಾರ, ಫೆಬ್ರವರಿ 14, 2014

'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಬೆನಕ ಬುಕ್ಸ್ ಬ್ಯಾಂಕ್ ಮತ್ತು ಗಹನಾ ಬುಕ್ಸ್ ಲಿಂಕ್ಸ್ ನ ಜಾಹೀರಾತು


ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕದಂಗಡಿಯ ಫೋಟೋ ಗ್ಯಾಲರಿ












ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

'ಇಜ್ಞಾನ' ವೆಬ್ ಸೈಟಿನಲ್ಲಿ ಪರಿಚಯಗೊಂಡ ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಪುಸ್ತಕ. ಇದನ್ನು ಓದಲು ಇಜ್ಞಾನ ವೆಬ್ ಸೈಟಿನ ಈ ಲಿಂಕ್ ನ್ನು ಕ್ಲಿಕ್ ಮಾಡಿ : http://www.ejnana.com/2014/01/blog-post_9.html?spref=fb

ನಮ್ಮ ಮೂವತ್ತೆರಡನೇ ಪ್ರಕಟಣೆ - ಪ್ರಸಂಗಗಳಲ್ಲಿ ವಿಜ್ಞಾನದ ಮೋಜು

ನಮ್ಮ ನಿತ್ಯ ಬದುಕಿನ ಘಟನೆಗಳಲ್ಲಿ ಅಡಗಿರುವ ವಿಜ್ಞಾನವನ್ನು ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತೆ ಹೇಳುವ ಪ್ರೊ.ಎಮ್.ಆರ‍್.ನಾಗರಾಜು ಅವರ ಪುಸ್ತಕವೇ 'ಪ್ರಸಂಗಗಳಲ್ಲಿ ವಿಜ್ಞಾನದ ಮೋಜು'
ಹಿರಿಯ ಶಿಕ್ಷಣ ತಜ್ಞರಾದ ಪ್ರೊ.ಎಮ್.ಆರ‍್.ನಾಗರಾಜು ಅವರು ನಮ್ಮ ದಿನನಿತ್ಯ ಬದುಕಿನ ಕೆಲವು ಘಟನೆಗಳಲ್ಲಿ ವಿಜ್ಞಾನ ಎನ್ನುವುದು ಹೇಗೆ ಅಡಗಿದೆ ಮತ್ತು ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇ ಹೌದಾದರೆ ಅದರ ವೈಜ್ಞಾನಿಕ ಹಿನ್ನೆಲೆಯನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವುದನ್ನು ಈ ಪುಸ್ತಕದಲ್ಲಿ ಪ್ರಸಂಗಗಳ ಮೂಲಕ ವಿವರಿಸಿದ್ದಾರೆ. ಅಂದರೆ ನಮ್ಮ ದಿನನಿತ್ಯ ಬದುಕಿನಲ್ಲಿ ನಡೆಯುವ ಯಾವುದಾದರೂ ಒಂದು ಘಟನೆಯನ್ನಿಟ್ಟುಕೊಂಡು, ಅದರ ಹಿನ್ನೆಲೆಯಲ್ಲಿ ಇರುವ ವಿಜ್ಞಾನವೇನು ಎನ್ನುವುದನ್ನು ಅತ್ಯಂತ ಸರಳವಾಗಿ ಇಲ್ಲಿರುವ ಇಪ್ಪತ್ತೈದು ಪ್ರಸಂಗಗಳಲ್ಲಿ ವಿವರಿಸಿದ್ದಾರೆ. ಪ್ರತಿಯೊಂದು ಪ್ರಸಂಗಗಳಿಗೂ ಹೊಂದುವಂತಹ ವ್ಯಂಗ್ಯಚಿತ್ರಗಳಿರುವುದು ಈ ಪುಸ್ತಕದ ವಿಶೇಷಗಳಲ್ಲೊಂದು.
ಈ ಪುಸ್ತಕ 80 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 60 ರೂಪಾಯಿ.

ನಮ್ಮ ಮೂವತ್ತೊಂದನೇ ಪ್ರಕಟಣೆ - ನಿತ್ಯ ಬದುಕಿಗೆ ಸರಳ ಕಾನೂನು ಸಲಹೆಗಳು

ಖ್ಯಾತ ವಕೀಲರು, ಕನ್ನಡ ಪರ ಹೋರಾಟಗಾರರು ಹಾಗೂ ಹಿರಿಯ ಲೇಖಕಿಯಾಗಿ ಹೆಸರು ಗಳಿಸಿರು ಹೇಮಲತಾ ಮಹಿಷಿಯವರು ಬರೆದಿರುವ ಪುಸ್ತಕ 'ನಿತ್ಯ ಬದುಕಿಗೆ ಸರಳ ಕಾನೂನು ಸಲಹೆಗಳು'
ಕಾನೂನು ಎಂದರೆ ಜನಸಾಮಾನ್ಯರು ಸುಲಭವಾಗಿ ಅರಿಯಲಾರದ್ದು ಎನ್ನುವಂತಹ ತಪ್ಪು ಅಭಿಪ್ರಾಯವೊಂದು ನಮ್ಮ ನಡುವಿದೆ. ಆದರೆ ನಮ್ಮ ನೆಲದ ಕಾನೂನು ಹಾಗಲ್ಲ. ಅದನ್ನು ಜನಸಾಮಾನ್ಯರು ಕೂಡಾ ಮನಸ್ಸು ಮಾಡಿದರೆ ಅರ್ಥ ಮಾಡಿಕೊಳ್ಳಬಹುದು ಮತ್ತು ಅದರ ಬಗ್ಗೆ ಮನಸ್ಸಿನೊಳಗಿರುವ ಭಯವನ್ನು ದೂರ ಮಾಡಿಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಹೇಮಲತಾ ಮಹಿಷಿಯವರು ಪ್ರಿಯಾಂಕ ಮಾಸಪತ್ರಿಕೆಯಲ್ಲಿ ಓದುಗರ ಕಾನೂನು ಸಮಸ್ಯೆಗಳ ಪ್ರಶ್ನೆಗಳಿಗೆ ನೀಡಿದ ಉತ್ತರಗಳ ಸಂಕಲನ ಇದಾಗಿದ್ದು, ಕಾನೂನು ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಈ ಪುಸ್ತಕ ಮಾರ್ಗದರ್ಶಿಯಾಗುವುದರಲ್ಲಿ ಅನುಮಾನವಿಲ್ಲ.
ಈ ಪುಸ್ತಕ 108 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 80 ರೂಪಾಯಿ.

ನಮ್ಮ ಮೂವತ್ತನೇ ಪ್ರಕಟಣೆ - ರೈಟ್ ಚಾಯ್ಸ್

ಒಂದು ಕೆಲಸ ಸಿಕ್ಕುವುದೇ ಕಷ್ಟ, ಹೀಗಿರುವಾಗ ಇರುವ ಕೆಲಸ ಬಿಟ್ಟು ಇನ್ನೊಂದು ಕೆಲಸದಲ್ಲಿ ಸಾಧಿಸುವುದಾ ಎಂದು ಅಚ್ಚರಿಯಿಂದ ಕಣ್ಣರಳಿಸುವ ಯುವಜನರಿಗೆಂದೇ ಬಂದಿರುವ ಹೊಸ ಪುಸ್ತಕ 'ರೈಟ್ ಚಾಯ್ಸ್'.
'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ 'ರೈಟ್ ಚಾಯ್ಸ್' ಎನ್ನುವ ಹೆಸರಿನಲ್ಲೇ ಅಂಕಣವಾಗಿ ಮೂಡಿಬಂದು ಯುವಜನರಿಗೆ ಸ್ಫೂರ್ತಿಯಾಗಿದ್ದ ಈ ಅಂಕಣ ಬರಹಗಳನ್ನೇ ಕೆ.ಗಣೇಶಕೋಡೂರು ಅವರು ಒಟ್ಟುಗೂಡಿಸಿ 'ರೈಟ್ ಚಾಯ್ಸ್' ಎನ್ನುವ ಹೆಸರಿನಲ್ಲೇ ಪುಸ್ತಕವಾಗಿಸಿದ್ದಾರೆ. ಬ್ಯಾಂಕಿನ ಕೆಲಸ ಬಿಟ್ಟು ಬರವಣಿಗೆಯಲ್ಲಿ ದೊಡ್ಡ ಯಶಸ್ಸು ಕಂಡ ಚೇತನ್ ಭಗತ್, ಸಿನಿಮಾ ಬಿಟ್ಟು ಡಿಜಿಟಲ್ ಪ್ರಿಂಟಿಂಗಿನಲ್ಲಿ ಸಕ್ಸಸ್ಫುಲ್ ಬ್ಯುಸಿನೆಸ್ ಮನ್ನಾಗಿ ಬೆಳೆದ ಉದಯ್ ಹುತ್ತಿನಗದ್ದೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ‍್ ಕೆಲಸ ಬಿಟ್ಟು ಕೋಚಿಂಗ್ ಸೆಂಟರ‍್ ಆರಂಭಿಸಿ ಗೆಲುವು ಕಂಡ ತೀರ್ಥಹಳ್ಳಿ ಕೇಶವ ಮೂರ್ತಿ... ಹೀಗೆ ನಮ್ಮ ನಡುವಿನ ಹತ್ತು ಯುವ ಸಾಧಕರ ಬದುಕಿನ ಕಥೆಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ಇನ್ನೇನೂ ಇಲ್ಲ ಎಂದು ಸೋತು ಕೈ ಚೆಲ್ಲಿದವರು ಒಮ್ಮೆ ಈ ಪುಸ್ತಕವನ್ನು ಓದಿದರೆ ಖಂಡಿತಾ ಅವರು ಗೆಲುವಿನೆಡೆಗೆ ಮೊದಲ ಹೆಜ್ಜೆ ಇಡಬಹುದಾಗಿದೆ.
ಈ ಪುಸ್ತಕ 68 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 50 ರೂಪಾಯಿ.

ನಮ್ಮ ಇಪ್ಪತ್ತೊಂಭತ್ತನೇ ಪ್ರಕಟಣೆ - ರಾಂಗ್ ಶೋ ಮತ್ತು ಇತರ ಕಥೆಗಳು

ಈಗಾಗಲೇ ತಮ್ಮ ಹಲವಾರು ಕಥೆಗಳ ಮೂಲಕ ಕನ್ನಡ ಕಥಾ ಜಗತ್ತಿಗೆ ಪರಿಚಯಿಸಲ್ಪಟ್ಟಿರುವ ಕಥೆಗಾರರಾದ ನಾಗರಾಜ ಹವಾಲ್ದಾರ‍್ ಅವರ ಕಥಾಸಂಕಲನ 'ರಾಂಗ್ ಶೋ ಮತ್ತು ಇತರ ಕಥೆಗಳು'. ಇಲ್ಲಿಯವರೆಗೆ ಲೇಖನ, ಕವನ ಸಂಕಲನಗಳನ್ನು ಮಾತ್ರ ಪ್ರಕಟಿಸಿದ್ದ ಬೆನಕ ಬುಕ್ಸ್ ಬ್ಯಾಂಕಿನಿಂದ ಹೊರಬರುತ್ತಿರುವ ಮೊದಲ ಕಥಾ ಸಂಕಲನ ಇದಾಗಿದೆ.
ಮಡಿಕೇರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಖ್ಯಾತ ಸಾಹಿತಿ ನಾ.ಡಿಸೋಜಾ ಅವರ ಮುನ್ನುಡಿಯನ್ನೊಳಗೊಂಡಿರುವ ಈ ಕಥಾ ಸಂಕಲನದಲ್ಲಿ ಒಟ್ಟು 6 ಕಥೆಗಳಿವೆ. ’... ನಾನು ಮೊದಲೇ ಹೇಳಿದ ಹಾಗೆ ನಾಗರಾಜ್ ಹವಾಲ್ದಾರ‍್ ಅವರಿಗೆ ಕೇವಲ ಕಥೆ ಹೇಳುವ ಉತ್ಸಾಹ ಮಾತ್ರವಿಲ್ಲ. ಅವರು ಪಾತ್ರ, ಸಂಭಾಷಣೆ, ಘಟನೆಗಳನ್ನು ಜೋಡಿಸಿಕೊಂಡು ಕಥೆಗಳ ಮೂಲಕ ಬೇರೇನನ್ನೋ ಹೇಳುವ ಯತ್ನ ಮಾಡಿದ್ದಾರೆ’ ಎನ್ನುವ ನಾ.ಡಿಸೋಜಾ ಅವರ ಮುನ್ನುಡಿ ಸಾಲುಗಳು ನಾಗರಾಜ್ ಹವಾಲ್ದಾರ‍್ ಅವರೊಳಗಿನ ಕಥೆಗಾರನನ್ನು ಅನಾವರಣಗೊಳಿಸುತ್ತದೆ. ಈ ಪುಸ್ತಕಕ್ಕೆ ಸರ್ಜಾಶಂಕರ ಹರಳಿಮಠ ಅವರು ಬೆನ್ನುಡಿ ಬರೆದಿದ್ದಾರೆ.
ಈ ಪುಸ್ತಕ 96 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 70 ರೂಪಾಯಿ.

ಆಹಾ! ಆಟಿಕೆಗಳು ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ

ನಮ್ಮ ಬುಕ್ಸ್ ಬ್ಯಾಂಕ್ ಪ್ರಕಟಿಸಿದ ನಾರಾಯಣ ಬಾಬಾನಗರ ಅವರ ’ಆಹಾ!ಆಟಿಕೆಗಳು’ ಪುಸ್ತಕದ ಬಿಡುಗಡೆ ಸಮಾರಂಭವನ್ನು ಸರಸ ಸಂವಹನ ಜಿಲ್ಲಾ ಸಮಿತಿ ಬಿಜಾಪುರ ನಡೆಸಿಕೊಟ್ಟಿತು. ಆ ಸಮಾರಂಭದ ಕೆಲವು ಫೋಟೋಗಳು.







ನಮ್ಮ ಇಪ್ಪತ್ತೆಂಟನೇ ಪ್ರಕಟಣೆ - ಆಹಾ! ಆಟಿಕೆಗಳು

ಕನ್ನಡದ ವಿಜ್ಞಾನ ಬರಹಗಳಲ್ಲಿ ತಮ್ಮದೇ ವಿಶೇಷ ಶೈಲಿಯಿಂದ ಓದುಗರ ಮನ ಗೆದ್ದಿರುವ ನಾರಾಯಣ ಬಾಬಾನಗರ ಅವರ ಹೊಸ ಪುಸ್ತಕ 'ಆಹಾ! ಆಟಿಕೆಗಳು'.
ಕನ್ನಡದ ಪ್ರಮುಖ ವಿಜ್ಞಾನ ಬರಹಗಾರರಾಗಿ ಗುರುತಿಸಿಕೊಳ್ಳುತ್ತಿರುವ ನಾರಾಯಣ ಬಾಬಾನಗರ ಅವರು ತಮ್ಮ ಬರವಣಿಗೆಗಳ ಮೂಲಕ ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಿಳಿಸಬೇಕು, ಈ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದವರು. ಮಕ್ಕಳಿಗೆ ಮತ್ತು ಶಿಕ್ಷಕರ ಅನುಕೂಲಕ್ಕೆಂದು ಒಂದಿಷ್ಟು ವಿಜ್ಞಾನದ ಆಟಿಕೆಗಳನ್ನು ಅವರು ಕಂಡುಕೊಂಡಿದ್ದು, ಅಂತಹ  ಆಟಿಕೆಗಳ ಬಗ್ಗೆ 8 ಅಧ್ಯಾಯಗಳನ್ನು ಬರೆದು ಅದನ್ನು 'ಅರ್ಥಪೂರ್ಣ ವಿಜ್ಞಾನ ಕಲಿಕೆಗೆ ಆಹಾ! ಆಟಿಕೆಗಳು' ಎನ್ನುವ ಹೆಸರಿನಲ್ಲಿ ಪುಸ್ತಕವನ್ನಾಗಿಸಿದ್ದಾರೆ. ಈ ಪುಸ್ತಕಕ್ಕೆ ಶಿಕ್ಷಣ ತಜ್ಞರಾದ ಪ್ರೊ.ಎಮ್.ಆರ‍್.ನಾಗರಾಜು ಅವರು ಬೆನ್ನುಡಿ ಬರೆದಿದ್ದು, 'ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ, ಆಟಿಕೆಗಳು ಬೋಧನಾ ಸಾಮಾಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಾಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ, ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ...' ಎಂದು ಬೆನ್ನುಡಿಯಲ್ಲಿ ಹೇಳಿರುವುದೇ, ಈ ಪುಸ್ತಕ ಆಟ ಮತ್ತು ಪಾಠವನ್ನು ಒಂದು ಮಾಡುವಂತಹದ್ದು ಎನ್ನುವುದನ್ನು ಹೇಳುತ್ತದೆ. ಆದ್ದರಿಂದ ಮಕ್ಕಳಿಗೆ ಸುಲಭವಾಗಿ ವಿಜ್ಞಾನ ಕಲಿಸಿಕೊಡಬೇಕು ಎಂದು ಇಚ್ಛಿಸುವ ಶಿಕ್ಷಕರಿಗೆ ಇದು ಅತ್ಯುಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕ 52 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ನಮ್ಮ ಇಪ್ಪತ್ತೇಳನೇ ಪ್ರಕಟಣೆ - ಒನ್ ಲೈನ್ ನಾಲೆಡ್ಜ್

ಆಯುರ್ವೇದ ವೈದ್ಯರಾದರೂ ಸ್ಪರ್ಧಾತ್ಮ ಪರೀಕ್ಷೆಗಳು ಮತ್ತು ಸಾಮಾನ್ಯ ಜ್ಞಾನದಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಬರೆದಿರುವ ಪುಸ್ತಕ 'ಒನ್ ಲೈನ್ ನಾಲೆಡ್ಜ್ '
ಒಂದೊಂದು ಸಾಲಿನಲ್ಲೇ ಬೇಕಾದಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವುಗಳು ಸಹಾಯ ಮಾಡುತ್ತವೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಡಾ.ಕೆ.ಪೂರ್ಣಿಮಾ ಕೋಡೂರು ಅವರು ಈ ಪುಸ್ತಕವನ್ನು ಬರೆದಿದ್ದು, ಗೌರಿ ಲಂಕೇಶ್ ಅವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವುದು ವಿಶೇಷವಾಗಿದೆ. 'ಸಾಮಾನ್ಯ ಜ್ಞಾನವೆನ್ನುವುದು ಸಾಗರದಷ್ಟು ವಿಶಾಲವಾದದ್ದು. ಅದರ ಬಗ್ಗೆ ಯಾರು ಎಷ್ಟು ಬರೆದರೂ ಅದು ಕಡಿಮೆಯೇ. ಈಗಾಗಲೇ ಈ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಬರುತ್ತಲೂ ಇವೆ. ಡಾ.ಕೆ.ಪೂರ್ಣಿಮಾ ಕೋಡೂರು ಅವರು ಕೂಡಾ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಅವುಗಳ ನಡುವೆ ಇದೊಂದು ವಿಭಿನ್ನ ಪ್ರಯತ್ನವಾಗಿದೆ...’ ಎಂದು ಬೆನ್ನುಡಿಯಲ್ಲಿ ಗೌರಿ ಲಂಕೇಶ್ ಅವರು ಬರೆದಿರುವ ಸಾಲುಗಳು ಈ ಪುಸ್ತಕದ ವಿಭಿನ್ನತೆಯನ್ನು ತೆರೆದಿಡುತ್ತದೆ.
ಈ ಪುಸ್ತಕ 96 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 60 ರೂಪಾಯಿ.

ವಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕದಂಗಡಿಯ ಫೋಟೋ ಗ್ಯಾಲರಿ















ಚಿತ್ರಗಳು : ಪೃಥ್ವಿರಾಜ್ ಸುವರ್ಣ