ಶುಕ್ರವಾರ, ಡಿಸೆಂಬರ್ 30, 2011

ಎರಡು ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ

   ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಡೆಸುವ 'ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು - 56'’ರಲ್ಲಿ, ನಮ್ಮ ಬುಕ್ಸ್ ಬ್ಯಾಂಕಿನಿಂದ ಪ್ರಕಟಿಸಲ್ಪಟ್ಟಿರುವ ಎ.ಬಿ.ಪಾಟೀಲ ಅವರ 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಹಾಗೂ ಎಂ.ಎಸ್.ಧರ್ಮೆಂದ್ರ ಅವರ 'ಹೆಸರೇನಿಡಲಿ?!' ಪುಸ್ತಕ ಬಿಡುಗಡೆ ಸಮಾರಂಭ 2012ರ ಜನವರಿ 1 ನೇ ತಾರೀಖಿನ ಭಾನುವಾರದಂದು ಚಾಮರಾಜಪೇಟೆ ಒಂದನೇ ಮುಖ್ಯರಸ್ತೆಯ ಪ್ರಕಾಶ ಕೆಫೆ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಪುಂಡಲಿಕ ಹಾಲಂಬಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೈಗಾರಿಕಾ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪ್ರಭಾಕರ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಸಾಹಿತಿಗಳಾದ ಕೆ.ಜಿ.ಶಾಂತಯ್ಯನವರು ಈ ಎರಡು ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ. ನಮ್ಮ ಬುಕ್ಸ್ ಬ್ಯಾಂಕಿನ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಕೆ.ಗಣೇಶಕೋಡೂರು ಅವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಮಾರಂಭಕ್ಕೆ ಮೊದಲು ಲಘು ಉಪಾಹಾರದ ವ್ಯವಸ್ಥೆ ಇದೆ. 

ಬುಕ್ಸ್ ಬ್ಯಾಂಕಿನಿಂದ ನಾಲ್ಕು ಹೊಸ ಪುಸ್ತಕಗಳು

ಹೊಸ ಹಾಗೂ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯನ್ನಿಟ್ಟುಕೊಂಡೇ ಪುಸ್ತಕ ಪ್ರಕಟಣೆ ಆರಂಭಿಸಿದ ಬೆನಕ ಬುಕ್ಸ್ ಬ್ಯಾಂಕ್, ಈಗ ನಾಲ್ಕು ಹೊಸ ಪುಸ್ತಕಗಳನ್ನು ಒಂದೇ ಬಾರಿಗೆ ಓದುಗರ ಕೈಗಿಟ್ಟಿದೆ. ಬೆಂಗಳೂರಿನ ಸಪ್ನ ಬುಕ್ ಮಾಲ್ ಸೇರಿದಂತೆ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲೂ ಈ ನಾಲ್ಕು ಪುಸ್ತಕಗಳು ದೊರೆಯುತ್ತವೆ.






ಶುಕ್ರವಾರ, ಡಿಸೆಂಬರ್ 9, 2011

78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಕ್ಸ್ ಬ್ಯಾಂಕಿನ ಮಳಿಗೆ ನಂ. 150

ಗಂಗಾವತಿಯಲ್ಲಿ ನಡೆಯುತ್ತಿರುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಬೆನಕ ಬುಕ್ಸ್ ಬ್ಯಾಂಕಿನ ಪುಸ್ತಕ ಮಳಿಗೆಯನ್ನು ತೆರೆದಿದ್ದು, ನಮ್ಮ ಮಳಿಗೆ ಸಂಖ್ಯೆ.150. ಇಲ್ಲಿ ಬುಕ್ಸ್ ಬ್ಯಾಂಕಿನ ಎಲ್ಲಾ ಪುಸ್ತಕಗಳು ವಿಶೇಷ ರಿಯಾಯತಿ ದರದಲ್ಲಿ ದೊರೆಯುತ್ತಿದ್ದು, ಇತರ ಪ್ರಕಾಶಕರ ಪುಸ್ತಕಗಳೂ ದೊರೆಯುತ್ತವೆ. ಸಮ್ಮೇಳನಕ್ಕೆ ಹೋದಾಗ, ನಮ್ಮ ಮಳಿಗೆಗೂ ಒಮ್ಮೆ ಭೇಟಿ ಕೊಡಿ.