ಶುಕ್ರವಾರ, ನವೆಂಬರ್ 18, 2011

ನಮ್ಮ ಹತ್ತನೇ ಪ್ರಕಟಣೆ - ಮೊಬೈಲ್ ಮ್ಯಾನರ್ಸ್

ಈಗಾಗಲೇ  'ಹೊತ್ತಲ್ಲದ ಹೊತ್ತಿನಲ್ಲಿ...' ಕವನ ಸಂಕಲನವನ್ನು ಪ್ರಕಟಿಸಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ಕವಿ ನೇ.ಸು.ಉದಯಕುಮಾರ ಅವರು ಸಂಪಾದಿಸಿರುವ ಪುಸ್ತಕ 'ಮೊಬೈಲ್ ಮ್ಯಾನರ್ಸ್.'

ಮೊಬೈಲ್ ಬಳಕೆಗಿರಬೇಕಾದ ಇತಿಮಿತಿ ಹಾಗೂ ಅದರ ಬಳಕೆಯಲ್ಲಿರಬೇಕಾದ ಶಿಸ್ತಿನ ಬಗ್ಗೆ ಆತ್ಮೀಯ ಶೈಲಿಯಲ್ಲಿ ಹೇಳುವ ವಿವಿಧ ಲೇಖಕರ ಹನ್ನೆರಡು ಲೇಖನಗಳು ಈ ಸಂಕಲನದಲ್ಲಿದ್ದು, ಈ ಎಲ್ಲಾ ಲೇಖನಗಳೂ 'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಈಗಾಗಲೇ ಪ್ರಕಟಗೊಂಡವುಗಳಾಗಿದೆ. 'ನಿಮ್ದು ಯಾವ ಮಾಡೆಲ್ ಮೊಬೈಲ್,'  'ಪುಟ್ಟ ಮಕ್ಕಳ ಕೈಗೆ ಮೊಬೈಲ್ ಕೊಡಬೇಕಾ?,' 'ಮೊಬೈಲ್ ಮ್ಯಾನರ್ಸ್,' 'ಒಂದು ಮಿಸ್ಡ್ ಕಾಲ್ ಏನೆಲ್ಲ ಮಾಡಿಬಿಡುತ್ತದೆ?', 'ಮೊಬೈಲ್ ರಿಂಗ್ ಟೋನಿನಿಂದ ನಿಮ್ಮ ವ್ಯಕ್ತಿತ್ವ ತಿಳಿಯಬಹುದೇ?' ಸೇರಿದಂತೆ ಮೊಬೈಲ್ ಬಳಕೆಯ ಬಗ್ಗೆ ನಮಗೆ ಗೊತ್ತಿದ್ದೂ ಗೊತ್ತಿಲ್ಲದೇ ಇರುವ ಸಂಗತಿಗಳನ್ನು ಇಲ್ಲಿನ ಲೇಖನಗಳು ನಮಗೆ ಪರಿಚಯಿಸಿಕೊಡುತ್ತವೆ. ಪುಸ್ತಕದಲ್ಲಿರುವ ಎಲ್ಲಾ ಲೇಖನಗಳೂ ಎಲ್ಲೋ ಒಂದು ಕಡೆಯಿಂದ ನಮ್ಮ ವ್ಯಕ್ತಿತ್ವದ ತಿದ್ದುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ಪುಸ್ತಕ 60 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 25 ರೂಪಾಯಿ.

1 ಕಾಮೆಂಟ್‌: