ಗುರುವಾರ, ಜುಲೈ 7, 2011

ಆರನೇ ಪ್ರಕಟಣೆ - ಪ್ರೀತಿ ಕನವರಿಕೆಗಳು

ಬಿ.ಇ.ಎಲ್ ನಲ್ಲಿ ಸೀನಿಯರ‍್ ಟೆಕ್ನಿಶಿಯನ್ನಾಗಿ ಕೆಲಸ ಮಾಡುತ್ತಿರುವ ವಿ.ಶೇಷಾದ್ರಿಯವರು ಬರೆದ 50 ಪ್ರೀತಿ ಕುರಿತ ಕವನಗಳ ಸಂಕಲನ 'ಪ್ರೀತಿ ಕನವರಿಕೆಗಳು'. ಇಲ್ಲಿರುವ ಎಲ್ಲಾ ಕವನಗಳು ಪ್ರೀತಿ - ಪ್ರೇಮ ಮತ್ತು ಹೃದಯ -ಭಾವನೆಗಳ ಸುತ್ತಲೇ ಸುತ್ತುತ್ತದೆ. ಅದಕ್ಕೆ ಈ ಸಂಕಲನಕ್ಕೆ "ಹೃದಯದ ತೋಟದಲ್ಲರಳಿದ ಪ್ರೀತಿಯ ಹೂವುಗಳು" ಎನ್ನುವ ಉಪಶೀರ್ಷಿಕೆಯನ್ನು ನೀಡಲಾಗಿದೆ.  ಪ್ರತೀ ಕವನಕ್ಕೂ ಒಂದೊಂದು ರೇಖಾಚಿತ್ರವನ್ನು ಬಳಸಿರುವುದು ಈ ಸಂಕಲನದ ಸೊಬಗನ್ನು ಹೆಚ್ಚಿಸಿದೆ. ಈ ಸಂಕಲನದ ಮುನ್ನುಡಿ ಬರೆದಿರುವ ಪ್ರೊ.ಚಂದ್ರಶೇಖರ ಪಾಟೀಲ ಅವರೇ ಹೇಳುವಂತೆ, "ತನ್ನ ಅನುಭವದ ನೋವು - ನಲಿವುಗಳನ್ನು ಯಾವುದೇ ನಿಯಮಗಳ ಎಗ್ಗಿಲ್ಲದೆ ನೂರಾರು ಶಬ್ದಗಳಲ್ಲಿ ಹಂಚಿಕೊಂಡಿದ್ದಾರೆ. "ಪ್ರೀತಿ" ಎಂಬುದರ ಹಲವಾರು ಮಗ್ಗಲುಗಳು ಇಲ್ಲಿತೆರೆದುಕೊಂಡಿದೆ. ತನ್ನದೆಲ್ಲವನ್ನು ಹಂಚಿಕೊಳ್ಳಬೇಕೆಂಬ ಭಾವವೇ ಕವಿಯಾಗಬಯಸುವವನ ಮೊದಲ ಲಕ್ಷಣ" ಎನ್ನುವ ಸಾಲುಗಳು, ಶೇಷಾದ್ರಿಯವರ ಕವನದ ಶಕ್ತಿಯನ್ನು ಹೇಳುತ್ತದೆ. ಈ ಸಂಕಲನಕ್ಕೆ ಬೆನ್ನುಡಿಯನ್ನು ಖ್ಯಾತ ವಿಜ್ಞಾನ ಬರಹಗಾರರಾದ ಸುಧೀಂದ್ರ ಹಾಲ್ದೊಡ್ಡೇರಿ ಬರೆದಿದ್ದಾರೆ. 72 ಪುಟಗಳ ಈ ಕವನ ಸಂಕಲನದ ಬೆಲೆ 50 ರೂಪಾಯಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ