ಶುಕ್ರವಾರ, ಫೆಬ್ರವರಿ 14, 2014

ನಮ್ಮ ಮೂವತ್ತನೇ ಪ್ರಕಟಣೆ - ರೈಟ್ ಚಾಯ್ಸ್

ಒಂದು ಕೆಲಸ ಸಿಕ್ಕುವುದೇ ಕಷ್ಟ, ಹೀಗಿರುವಾಗ ಇರುವ ಕೆಲಸ ಬಿಟ್ಟು ಇನ್ನೊಂದು ಕೆಲಸದಲ್ಲಿ ಸಾಧಿಸುವುದಾ ಎಂದು ಅಚ್ಚರಿಯಿಂದ ಕಣ್ಣರಳಿಸುವ ಯುವಜನರಿಗೆಂದೇ ಬಂದಿರುವ ಹೊಸ ಪುಸ್ತಕ 'ರೈಟ್ ಚಾಯ್ಸ್'.
'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ 'ರೈಟ್ ಚಾಯ್ಸ್' ಎನ್ನುವ ಹೆಸರಿನಲ್ಲೇ ಅಂಕಣವಾಗಿ ಮೂಡಿಬಂದು ಯುವಜನರಿಗೆ ಸ್ಫೂರ್ತಿಯಾಗಿದ್ದ ಈ ಅಂಕಣ ಬರಹಗಳನ್ನೇ ಕೆ.ಗಣೇಶಕೋಡೂರು ಅವರು ಒಟ್ಟುಗೂಡಿಸಿ 'ರೈಟ್ ಚಾಯ್ಸ್' ಎನ್ನುವ ಹೆಸರಿನಲ್ಲೇ ಪುಸ್ತಕವಾಗಿಸಿದ್ದಾರೆ. ಬ್ಯಾಂಕಿನ ಕೆಲಸ ಬಿಟ್ಟು ಬರವಣಿಗೆಯಲ್ಲಿ ದೊಡ್ಡ ಯಶಸ್ಸು ಕಂಡ ಚೇತನ್ ಭಗತ್, ಸಿನಿಮಾ ಬಿಟ್ಟು ಡಿಜಿಟಲ್ ಪ್ರಿಂಟಿಂಗಿನಲ್ಲಿ ಸಕ್ಸಸ್ಫುಲ್ ಬ್ಯುಸಿನೆಸ್ ಮನ್ನಾಗಿ ಬೆಳೆದ ಉದಯ್ ಹುತ್ತಿನಗದ್ದೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ‍್ ಕೆಲಸ ಬಿಟ್ಟು ಕೋಚಿಂಗ್ ಸೆಂಟರ‍್ ಆರಂಭಿಸಿ ಗೆಲುವು ಕಂಡ ತೀರ್ಥಹಳ್ಳಿ ಕೇಶವ ಮೂರ್ತಿ... ಹೀಗೆ ನಮ್ಮ ನಡುವಿನ ಹತ್ತು ಯುವ ಸಾಧಕರ ಬದುಕಿನ ಕಥೆಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ಇನ್ನೇನೂ ಇಲ್ಲ ಎಂದು ಸೋತು ಕೈ ಚೆಲ್ಲಿದವರು ಒಮ್ಮೆ ಈ ಪುಸ್ತಕವನ್ನು ಓದಿದರೆ ಖಂಡಿತಾ ಅವರು ಗೆಲುವಿನೆಡೆಗೆ ಮೊದಲ ಹೆಜ್ಜೆ ಇಡಬಹುದಾಗಿದೆ.
ಈ ಪುಸ್ತಕ 68 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 50 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ