ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತೊಂಭತ್ತನೇ ಪ್ರಕಟಣೆ - ರಾಂಗ್ ಶೋ ಮತ್ತು ಇತರ ಕಥೆಗಳು

ಈಗಾಗಲೇ ತಮ್ಮ ಹಲವಾರು ಕಥೆಗಳ ಮೂಲಕ ಕನ್ನಡ ಕಥಾ ಜಗತ್ತಿಗೆ ಪರಿಚಯಿಸಲ್ಪಟ್ಟಿರುವ ಕಥೆಗಾರರಾದ ನಾಗರಾಜ ಹವಾಲ್ದಾರ‍್ ಅವರ ಕಥಾಸಂಕಲನ 'ರಾಂಗ್ ಶೋ ಮತ್ತು ಇತರ ಕಥೆಗಳು'. ಇಲ್ಲಿಯವರೆಗೆ ಲೇಖನ, ಕವನ ಸಂಕಲನಗಳನ್ನು ಮಾತ್ರ ಪ್ರಕಟಿಸಿದ್ದ ಬೆನಕ ಬುಕ್ಸ್ ಬ್ಯಾಂಕಿನಿಂದ ಹೊರಬರುತ್ತಿರುವ ಮೊದಲ ಕಥಾ ಸಂಕಲನ ಇದಾಗಿದೆ.
ಮಡಿಕೇರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಖ್ಯಾತ ಸಾಹಿತಿ ನಾ.ಡಿಸೋಜಾ ಅವರ ಮುನ್ನುಡಿಯನ್ನೊಳಗೊಂಡಿರುವ ಈ ಕಥಾ ಸಂಕಲನದಲ್ಲಿ ಒಟ್ಟು 6 ಕಥೆಗಳಿವೆ. ’... ನಾನು ಮೊದಲೇ ಹೇಳಿದ ಹಾಗೆ ನಾಗರಾಜ್ ಹವಾಲ್ದಾರ‍್ ಅವರಿಗೆ ಕೇವಲ ಕಥೆ ಹೇಳುವ ಉತ್ಸಾಹ ಮಾತ್ರವಿಲ್ಲ. ಅವರು ಪಾತ್ರ, ಸಂಭಾಷಣೆ, ಘಟನೆಗಳನ್ನು ಜೋಡಿಸಿಕೊಂಡು ಕಥೆಗಳ ಮೂಲಕ ಬೇರೇನನ್ನೋ ಹೇಳುವ ಯತ್ನ ಮಾಡಿದ್ದಾರೆ’ ಎನ್ನುವ ನಾ.ಡಿಸೋಜಾ ಅವರ ಮುನ್ನುಡಿ ಸಾಲುಗಳು ನಾಗರಾಜ್ ಹವಾಲ್ದಾರ‍್ ಅವರೊಳಗಿನ ಕಥೆಗಾರನನ್ನು ಅನಾವರಣಗೊಳಿಸುತ್ತದೆ. ಈ ಪುಸ್ತಕಕ್ಕೆ ಸರ್ಜಾಶಂಕರ ಹರಳಿಮಠ ಅವರು ಬೆನ್ನುಡಿ ಬರೆದಿದ್ದಾರೆ.
ಈ ಪುಸ್ತಕ 96 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 70 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ