ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತೆಂಟನೇ ಪ್ರಕಟಣೆ - ಆಹಾ! ಆಟಿಕೆಗಳು

ಕನ್ನಡದ ವಿಜ್ಞಾನ ಬರಹಗಳಲ್ಲಿ ತಮ್ಮದೇ ವಿಶೇಷ ಶೈಲಿಯಿಂದ ಓದುಗರ ಮನ ಗೆದ್ದಿರುವ ನಾರಾಯಣ ಬಾಬಾನಗರ ಅವರ ಹೊಸ ಪುಸ್ತಕ 'ಆಹಾ! ಆಟಿಕೆಗಳು'.
ಕನ್ನಡದ ಪ್ರಮುಖ ವಿಜ್ಞಾನ ಬರಹಗಾರರಾಗಿ ಗುರುತಿಸಿಕೊಳ್ಳುತ್ತಿರುವ ನಾರಾಯಣ ಬಾಬಾನಗರ ಅವರು ತಮ್ಮ ಬರವಣಿಗೆಗಳ ಮೂಲಕ ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಿಳಿಸಬೇಕು, ಈ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದವರು. ಮಕ್ಕಳಿಗೆ ಮತ್ತು ಶಿಕ್ಷಕರ ಅನುಕೂಲಕ್ಕೆಂದು ಒಂದಿಷ್ಟು ವಿಜ್ಞಾನದ ಆಟಿಕೆಗಳನ್ನು ಅವರು ಕಂಡುಕೊಂಡಿದ್ದು, ಅಂತಹ  ಆಟಿಕೆಗಳ ಬಗ್ಗೆ 8 ಅಧ್ಯಾಯಗಳನ್ನು ಬರೆದು ಅದನ್ನು 'ಅರ್ಥಪೂರ್ಣ ವಿಜ್ಞಾನ ಕಲಿಕೆಗೆ ಆಹಾ! ಆಟಿಕೆಗಳು' ಎನ್ನುವ ಹೆಸರಿನಲ್ಲಿ ಪುಸ್ತಕವನ್ನಾಗಿಸಿದ್ದಾರೆ. ಈ ಪುಸ್ತಕಕ್ಕೆ ಶಿಕ್ಷಣ ತಜ್ಞರಾದ ಪ್ರೊ.ಎಮ್.ಆರ‍್.ನಾಗರಾಜು ಅವರು ಬೆನ್ನುಡಿ ಬರೆದಿದ್ದು, 'ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ, ಆಟಿಕೆಗಳು ಬೋಧನಾ ಸಾಮಾಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಾಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ, ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ...' ಎಂದು ಬೆನ್ನುಡಿಯಲ್ಲಿ ಹೇಳಿರುವುದೇ, ಈ ಪುಸ್ತಕ ಆಟ ಮತ್ತು ಪಾಠವನ್ನು ಒಂದು ಮಾಡುವಂತಹದ್ದು ಎನ್ನುವುದನ್ನು ಹೇಳುತ್ತದೆ. ಆದ್ದರಿಂದ ಮಕ್ಕಳಿಗೆ ಸುಲಭವಾಗಿ ವಿಜ್ಞಾನ ಕಲಿಸಿಕೊಡಬೇಕು ಎಂದು ಇಚ್ಛಿಸುವ ಶಿಕ್ಷಕರಿಗೆ ಇದು ಅತ್ಯುಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕ 52 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ