ಗುರುವಾರ, ಫೆಬ್ರವರಿ 13, 2014

ನಮ್ಮ ಹದಿನಾಲ್ಕನೇ ಪ್ರಕಟಣೆ - ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಆಯುರ್ವೇದ ವೈದ್ಯ ಸಾಹಿತಿಯಾಗಿ ಹೆಸರು ಗಳಿಸಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರ ಆಯುರ್ವೇದದ ಸುಲಭ ಚಿಕಿತ್ಸೆಗಳನ್ನೊಳಗೊಂಡ ಪುಸ್ತಕ ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ.
ಈಗಾಗಲೇ ಹಲವು ಆಯುರ್ವೇದ ಪುಸ್ತಕಗಳನ್ನು ಪ್ರಕಟಿಸಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರ 'ಹೆಲ್ತಿ ಲೈಫ್ ಸ್ಟೈಲ್' ಪುಸ್ತಕ ನಮ್ಮ ಬುಕ್ಸ್ ಬ್ಯಾಂಕಿನಿಂದ ಪ್ರಕಟಗೊಂಡಿದ್ದು, ಇದು ನಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಳ್ಳುತ್ತಿರುವ ಅವರ ಎರಡನೇ ಪುಸ್ತಕ. ಈ ಪುಸ್ತಕದಲ್ಲಿ ನಿತ್ಯ ಬದುಕಿನಲ್ಲಿ ಬಳಕೆಯಲ್ಲಿರುವ ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ಹಲವು ವಸ್ತುಗಳಲ್ಲಿರುವ ಔಷಧೀಯ ಗುಣಗಳು ಮತ್ತು ಅವು ಯಾವ್ಯಾವ ಕಾಯಿಲೆಗೆ ಮದ್ದಾಗುತ್ತದೆ ಎನ್ನುವುದನ್ನು ಅತಿ ಸರಳ ಶೈಲಿಯಲ್ಲಿ ವಿವರಿಸಲಾಗಿದೆ.
ಈ ಪುಸ್ತಕ 96 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 50 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ