ಶುಕ್ರವಾರ, ಫೆಬ್ರವರಿ 14, 2014

ನಮ್ಮ ಹತ್ತೊಂಭತ್ತನೇ ಪ್ರಕಟಣೆ - ಬದುಕಿನ ಬೇಲಿಗೆ ಹಗ್ಗವಿಲ್ಲದೆ...

ಬದುಕಿನ ಸಣ್ಣ ಸಣ್ಣ ಅನುಭವಗಳು ನಮ್ಮ ಬದುಕನ್ನು ಹೇಗೆ ರೂಪಿಸುತ್ತಾ ಹೋಗುತ್ತವೆ ಎನ್ನುವುದಕ್ಕೆ ವೈದ್ಯರಾಗಿ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಡಾ.ಕೆ.ಶಿವರಾಂ ಅವರು ಬರೆದಿರುವ ಪುಸ್ತಕ 'ಬದುಕಿನ ಬೇಲಿಗೆ ಹಗ್ಗವಿಲ್ಲದೆ'.
ಈ ಪುಸ್ತಕ ಒಟ್ಟು ಹದಿನಾರು ಅಧ್ಯಾಯಗಳನ್ನು ಒಳಗೊಂಡಿದೆ. 'ನನ್ನ ಅಪ್ಪನೂ ಒಂದಿಷ್ಟು ಆಸ್ತಿ ಮಾಡಿಟ್ಟಿದ್ದರೆ...', 'ಬೇಡವೆಂದು ಎಸೆಯುವ ಮೊದಲು', 'ನಮಗಿರುವುದೇ ನಾವಾದರೆ ನಮಗೆ ಏನೂ ಇಲ್ಲದೇ ಇದ್ದಾಗ ನಾವು ಯಾರು?', 'ಈ ವ್ಯಕ್ತಿತ್ವವೆನ್ನುವುದು ತೆಂಗಿನಕಾಯಿಯಂತೆ', 'ನನ್ನನ್ನು ಕೇಳಿ ಹುಟ್ಟಿಸಿದಿರಾ ಎನ್ನುವ ಪ್ರಶ್ನೆ ಎದುರಾದಾಗ..' ಹೀಗೆ ಬದುಕಿನ ಹಲವು ಮಜಲುಗಳನ್ನು ತೀರಾ ಆತ್ಮೀಯ ಶೈಲಿಯಲ್ಲಿ ಪರಿಚಯಿಸುವ ಇಲ್ಲಿನ ಒಂದೊಂದು ಅಧ್ಯಾಯಗಳೂ ನಮ್ಮ ನಿಮ್ಮ ಬದುಕಿನ ನಡುವಿನಿಂದಲೇ ಹೆಕ್ಕಿ ತೆಗೆದಂತಿದೆ. ಬೋಧನೆಯ ರೀತಿ ಬದುಕಿನ ಬಗ್ಗೆ ಹೇಳದೇ ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನೊಂದಿಗೆ ಮಾತನಾಡುವಂತೆ ಬದುಕನ್ನು ತೆರೆದಿಟ್ಟಿರುವ ಈ ಪುಸ್ತಕ ಎಲ್ಲಾ ವಯೋಮಾನದವರಿಗೂ ಹೇಳಿ ಮಾಡಿಸಿದಂತಿದೆ.
ಈ ಪುಸ್ತಕ 104 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 60 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ