ಗುರುವಾರ, ಫೆಬ್ರವರಿ 13, 2014

ನಮ್ಮ ಹದಿನೆಂಟನೇ ಪ್ರಕಟಣೆ - ಸುಲಭ ಓದಿಗೆ ಸಾವಿರ ಮಾರ್ಗಗಳು

ಓದುವುದಕ್ಕೆ ಸುಲಭವಾದ ವಿಧಾನ ಯಾವುದು? ಈ ಪ್ರಶ್ನೆಗೆ ನಿಮಗೆ ಸಿಗಬಹುದಾದ ಅತಿ ಸರಳವಾದ ಉತ್ತರವೇ 'ಸುಲಭ ಓದಿಗೆ ಸಾವಿರ ಮಾರ್ಗಗಳು'.
ಓದುವುದಕ್ಕೆ ಒಂದುಶಿಸ್ತಿರಬೇಕು ಎಂದು ಹೇಳುತ್ತಾರೆ. ಹಾಗಿದ್ದರೆ ಶಿಸ್ತು ಎಂದರೇನು? ಒಂದೊಮ್ಮೆ ಶಿಸ್ತಿಲ್ಲದೇ ಇದ್ದರೆ ಓದಲಿಕ್ಕೆಸಾಧ್ಯವಿಲ್ಲವಾ? ನಿಮ್ಮ ಮನಸ್ಸಿನಲ್ಲಿ ಓದಿಗೆ ಸಂಬಂಧಿಸಿದಂತೆ ಇರುವ ಪ್ರಶ್ನೆಗಳಿಗೆ ಸುಲಭ ಓದಿಗೆ ಸಾವಿರ ಮಾರ್ಗಗಳು ಉತ್ತರ ಹೇಳುತ್ತದೆ. ಇದರಲ್ಲಿ ಏಕಾಗ್ರತೆಯನ್ನು ಸಂಪಾದಿಸಿಕೊಳ್ಳುವುದು ಹೇಗೆ? ಅವತ್ತಿನದ್ದು ಅವತ್ತೇ ಓದುವುದಕ್ಕೆ ಇರುವ ಕಾರಣ, ಓದಲು ಕುಳಿತಾಗಲೇ ಬೇರೆಲ್ಲ ನೆನಪಾಗುವುದೇಕೆ.. ಹೀಗೆ ನಿಮ್ಮ ಓದಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಈ ಪುಸ್ತಕದ ಓದು ಸುಲಭದ ಪರಿಹಾರವಾಗಿದೆ.
ಈ ಪುಸ್ತಕ 80 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ