ಗುರುವಾರ, ಫೆಬ್ರವರಿ 13, 2014

ನಮ್ಮ ಹದಿನೇಳನೇ ಪ್ರಕಟಣೆ - ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವೇಕೆ ಫೇಲಾಗುತ್ತೀರಿ?

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಡಿಕೊಳ್ಳಬೇಕಾದ ತಯಾರಿಯ ಬಗ್ಗೆ ಕನ್ನಡದಲ್ಲಿ ಬಂದ ಮೊಟ್ಟ ಮೊದಲ ಪುಸ್ತಕ 'ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವೇಕೆ ಫೇಲಾಗುತ್ತೀರಿ?'
ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ವಿಷಯಗಳಿಗೆ ಸಂಬಂಧಿಸಿದಂತೆ ಸಾವಿರಾರು ಪುಸ್ತಕಗಳು ಬಂದಿವೆ, ಬರುತ್ತಲೂ ಇವೆ. ಆದರೆ ಪರೀಕ್ಷೆಗೆ ತಯಾರಾಗುವುದೆಂದರೆ ಬರೀ ಓದುವುದಲ್ಲ, ಅದನ್ನು ಮೀರಿದ್ದೊಂದಿದೆ ಎನ್ನುವುದು ಯಾರಿಗೂ ಗೊತ್ತಾಗಿರಲಿಲ್ಲ. ಒಂದೊಮ್ಮೆ ಗೊತ್ತಾಗಿದ್ದರೂ ಅದಕ್ಕೆ ಪರಿಹಾರವನ್ನು ಕಂಡು ಹಿಡಿಯಲಿಕ್ಕಾಗಿರಲಿಲ್ಲ. ಇಂತಹ ಹೊತ್ತಿನಲ್ಲಿ ಅಪರೂಪದ ಪುಸ್ತಕವಾಗಿ ಕನ್ನಡ ಪುಸ್ತಕ ಪ್ರಪಂಚವನ್ನು ಪ್ರವೇಶಿಸಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವೇಕೆ ಫೇಲಾಗುತ್ತೀರಿ. ಪರೀಕ್ಷೆಗೆ ಎಷ್ಟು ಓದಬೇಕು, ಎಕ್ಸಾಮ್ ಸೆಂಟರ‍್ರಿಗೆ ಹೋಗುವ ಮೊದಲು ಮನಸ್ಸು ಯಾವ ಸ್ಥಿತಿಯಲ್ಲಿರಬೇಕು, ಒಂದೊಂದು ಪ್ರಶ್ನೆಗಳಿಗೆ ಉತ್ತರಿಸುವಾಗಲೂ ಮನಸ್ಸು ಎಷ್ಟರಮಟ್ಟಿಗೆ ತೊಡಗಿಕೊಳ್ಳಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆದವರಿಗಿಂತ ದುಡ್ಡು ಕೊಟ್ಟು ಕೆಲಸ ಪಡೆದವರೇ ಎನ್ನುವ ಭ್ರಮೆಯನ್ನು ಹೇಗೆ ಮನಸ್ಸಿನಿಂದ ತೆಗೆಯಬೇಕು ಎನ್ನುವುದನ್ನು ಈ ಪುಸ್ತಕ ವಿವರಿಸುತ್ತದೆ.
ಈ ಪುಸ್ತಕ 104 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 60 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ