ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತೈದನೇ ಪ್ರಕಟಣೆ -ಬೆಳಗುವ ಮೊದಲೇ ನಂದಿಹೋದ ನಂದಾದೀಪಗಳು

ಕನ್ನಡ ಚಿತ್ರರಂಗದಲ್ಲಿ ಬೆಳಗುವ ಮೊದಲೇ ಕಮರಿ ಹೋದ ಪ್ರತಿಭೆಗಳ ಬದುಕಿನ ಚಿತ್ರಣವನ್ನು ತೆರೆದಿಡುವ ಪ್ರಯತ್ನವೇ 'ಬೆಳಗುವ ಮೊದಲೇ ನಂದಿಹೋದ ನಂದಾದೀಪಗಳು'.
ಈಗಾಗಲೇ 'ಬದುಕು ಅರಳುವ ಸಮಯ' ಮತ್ತು 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಎನ್ನುವ ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಒತ್ತಿರುವ ಯುವ ಲೇಖಕ ಎ.ಬಿ.ಪಾಟೀಲ ಅವರ ಹೊಸ ಪುಸ್ತಕ ಬೆಳಗುವ ಮೊದಲೇ ನಂದಿ ಹೋದ ನಂದಾದೀಪಗಳು, ಕನ್ನಡ ಚಿತ್ರರಂಗದ ಪಾಲಿಗೆ ಅಪರೂಪದ ದಾಖಲೆ ಎನ್ನುವುದರಲ್ಲಿ ಸಂದೇಹವಿಲ್ಲ. ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಕಾಲ ಇದ್ದು, ತಮ್ಮ ಪ್ರತಿಭೆಯಿಂದ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಬೆಳಸಬೇಕಿದ್ದ ಶಂಕರ‍್ ನಾಗ್, ಕಲ್ಪನಾ, ಮಂಜುಳಾ, ಕಿಶೋರ‍್ ಸರ್ಜಾ, ನೀಗ್ರೋ ಜಾನಿ, ಮುರುಳಿ, ಸೌಂದರ್ಯ, ವೆಂಕಿ, ಕರಿಬಸವಯ್ಯ, ನಿವೇದಿತಾ ಜೈನ್ ರಂತಹ ಪ್ರತಿಭೆಗಳ ಬದುಕಿನ ಬಗ್ಗೆ ಪಾಟೀಲ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ. ಇದರಲ್ಲಿ ಈ ಪ್ರತಿಭೆಗಳ ಬಗ್ಗೆ ಕೇವಲ ಪಾಟೀಲರ ಲೇಖನಗಳು ಮಾತ್ರವಲ್ಲದೇ, ಅಗಲಿದ ಈ ಪ್ರತಿಭೆಗಳ ಆಪ್ತರನ್ನು, ಕುಟುಂಬದವರನ್ನು ಮಾತನಾಡಿಸಿ ಪುಸ್ತಕಕ್ಕೆ ಹೊಸ ಟಚ್ ನೀಡಿದ್ದಾರೆ. ಈ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ತಾರಾ ಅನೂರಾಧ ಅವರು ಬೆನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು ಮುನ್ನುಡಿ ಬರೆದಿದ್ದಾರೆ.
ಈ ಪುಸ್ತಕ 140 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 100 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ