ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತೆರಡನೇ ಪ್ರಕಟಣೆ - ವಿಜ್ಞಾನ ವೈವಿಧ್ಯ

ವಿಜ್ಞಾನವನ್ನು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುವಂತಹ ಪುಸ್ತಕ ಪಿ.ಶ್ರೀಕಾಂತ್ ಬೆಟ್ಟಗದ್ದೆಯವರ ಎರಡನೇ ಪುಸ್ತಕ 'ವಿಜ್ಞಾನ ವೈವಿಧ್ಯ'.
ಈಗಾಗಲೇ ಬೆನಕ ಬುಕ್ಸ್ ಬ್ಯಾಂಕಿನಿಂದ ಶ್ರೀಕಾಂತ್ ಬೆಟ್ಟಗದ್ದೆಯವರ 'ದೇವರನ್ನು ದ್ವೇಷಿಸುವುದೂ ಒಂದು ಫ್ಯಾಶನ್ನು' ಎನ್ನುವ ಪುಸ್ತಕ  ಪ್ರಕಟಗೊಂಡಿದ್ದು, ಇದು ಅವರ ಎರಡನೇ ಪುಸ್ತಕವಾಗಿದೆ. ಇದರಲ್ಲಿ 'ಭೂಮಿಗೆ ಇತರ ಗ್ರಹಗಳ್ಯಾವುದಾದರೂ ಡಿಕ್ಕಿ ಹೊಡೆದರೆ?',  'ಹೂವಿಗೆ ಹೇಗೆ ಬಂತು ಈ ಬಣ್ಣ? ಈ ಘಮ?', 'ಹಲ್ಲಿ ಹೆಜ್ಜೆ ಹಿಂದಿರುವ ಹೊಸ ರಹಸ್ಯ', 'ಮುಳುಗುವ ಸೂರ್ಯನೇಕೆ ಕೆಂಪು ಕೆಂಪು?', 'ನಮಗೇಕೆ ವಯಸ್ಸಾಗುತ್ತದೆ?', 'ಇದು ಹೃದಯಗಳ ವಿಷಯ'... ಹೀಗೆ ವಿಜ್ಞಾನವನ್ನು ಸರಳವಾಗಿ ತಿಳಿಸಿಕೊಡುವಂತಹ 27 ಲೇಖನಗಳಿವೆ. ಈ ಎಲ್ಲಾ ಲೇಖನಗಳೂ ’ನಿಮ್ಮೆಲ್ಲರ ಮಾನಸ’ದಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿವೆ.
ಈ ಪುಸ್ತಕ 72 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ