ಗುರುವಾರ, ಫೆಬ್ರವರಿ 13, 2014

ನಮ್ಮ ಹದಿನಾರನೇ ಪ್ರಕಟಣೆ - ಸೀರಿಯಲ್ ಕಿಲ್ಲರ‍್ಸ್

ಜಗತ್ತಿನ ಅತಿ ಕ್ರೂರ ಸರಣಿ ಹಂತಕರ ಬದುಕಿನ ಬಗ್ಗೆ ಅಪರೂಪದ ನೋಟ ಬೀರುವ ಪುಸ್ತಕ 'ಸೀರಿಯಲ್ ಕಿಲ್ಲರ‍್ಸ್'.
'ನಿಮ್ಮೆಲ್ಲರ ಮಾನಸ' ಮಾಸಪತ್ರಿಕೆಯಲ್ಲಿ ಎರಡು ವರ್ಷಕ್ಕೂ ಹೆಚ್ಚಿನ ಕಾಲ ಪ್ರತೀ ತಿಂಗಳೂ ತಪ್ಪದೇ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿದ ಸಂಪಾದಕ ಕೆ.ಗಣೇಶಕೋಡೂರು ಅವರ ಸರಣಿ ಹಂತಕರ ಬಗೆಗಿನ ಅಂಕಣಗಳ ಸಂಕಲನವೇ ಸೀರಿಯಲ್ ಕಿಲ್ಲರ‍್ಸ್. ಸರಣಿ ಹಂತಕರ ಬದುಕಿನ ಕಥೆಯೆಂದರೆ ಅವರು ಮಾಡಿದ ಪಾತಕವನ್ನು ವೈಭವೀಕರಿಸುವುದು ಎನ್ನುವ ಅಭಿಪ್ರಾಯ ಸಾಮಾನ್ಯವಾಗಿರುವಾಗ, ಈ ಪುಸ್ತಕ ಅವರ ಬದುಕಿನ ಬೇರೊಂದು ಮುಖದೆಡೆಗೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಮನೋವಿಜ್ಞಾನದ ಹಿನ್ನೆಲೆಯಿಟ್ಟುಕೊಂಡು ಒಬ್ಬ ಸಾಮಾನ್ಯ ಮನುಷ್ಯ ಯಾಕೆ ಪಾತಕಿಯಾದ, ಆ ಪಾತಕದ ಹಿಂದಿನ ಮನಸ್ಸು ಎಂತಹದ್ದು, ಅದು ಪಾತಕವನ್ನು ಹೇಗೆ ಸ್ವೀಕರಿಸುತ್ತಿತ್ತು ಮತ್ತು ಮನೋವಿಜ್ಞಾನ ಇದನ್ನು ಹೇಗೆ ವಿಶ್ಲೇಷಿಸುತ್ತದೆ ಎನ್ನುವುದನ್ನು ಈ ಪುಸ್ತಕದ ಹಲವು ಅಧ್ಯಾಯಗಳು ಹೇಳುತ್ತವೆ. ಜಾನ್ ವೇನೇ ಗೇಸಿ, ಆಲ್ಬರ್ಟ್ ಫಿಶ್, ರಾಬರ್ಟ್ ಟೆಡ್ ಬಂಡಿ, ರಿಚರ್ಡ್ ಮ್ಯುನೇಜ್ ರಮಿರೆಜ್, ಜಾನ್ ಗ್ಲೋವರ‍್ ಸೇರಿದಂತೆ ಜಗತ್ತಿನ ಕುಖ್ಯಾತರ ಬದುಕು ಈ ಪುಸ್ತಕದಲ್ಲಿ ಪರಿಚಯಿಸಲ್ಪಟ್ಟಿದೆ.
ಈ ಪುಸ್ತಕ 112 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 70 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ