ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತನೇ ಪ್ರಕಟಣೆ - ಕನಸ ತುಂಬಿದ ಕವಿತೆ

ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಅಪರೂಪದ ಆತ್ಮೀಯ ಶೈಲಿಯ ಬರವಣಿಗೆಯಿಂದ ಹೆಸರು ಮಾಡಿರುವ ಎನ್.ಆರ‍್.ರೂಪಶ್ರೀ ಶಿರಸಿಯವರ ಕವನಗಳ ಸಂಕಲನ 'ಕನಸ ತುಂಬಿದ ಕವಿತೆ'.
ಸುನಂದಾ ಪ್ರಕಾಶ ಕಡಮೆಯವರ ಬೆನ್ನುಡಿಯನ್ನೊಳಗೊಂಡಿರುವ ಎನ್.ಆರ‍್.ರೂಪಶ್ರೀ ಶಿರಸಿಯವರ ಒಟ್ಟು 32 ಕವನಗಳು ಈ ಸಂಕಲನದಲ್ಲಿವೆ. ಚಿಂತಾಮಣಿ ಕೊಡ್ಲೆಕೆರೆಯವರು ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಸುನಂದಾ ಪ್ರಕಾಶ ಕಡಮೆಯವರ ಬೆನ್ನುಡಿಯಲ್ಲಿರುವ '...ಕಳೆದುಕೊಂಡ ವಸ್ತುವನ್ನು ಅದೇ ಜಾಗದಲ್ಲೇ ಹುಡುಕಬೇಕು ಎಂಬ ನಿಖರ ನಿಲುವಿನ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರೆ ರೂಪಶ್ರೀ, ತಾನು ಅಬಲೆ ಎಂದುಕೊಳ್ಳುತ್ತಲೇ ಸಂಪೂರ್ಣ ಕಾವ್ಯಕ್ಕೆ ಶರಣಾದವಳು. ಗಂಡನಲ್ಲಿ ಗೆಳೆಯನನ್ನು ಅರಸುವ ಚಾಣಾಕ್ಷರು ಮಾತ್ರ ನೆಮ್ಮದಿಯಿಂದ ಬಾಳಬಲ್ಲರು ಎಂಬ ನಂಬಿಕೆಯುಳ್ಳ ಈ ಕವಿಯ ಹಲವಾರು ಕವಿತೆಗಳಲ್ಲಿಯ ಒಂದು ಬಗೆಯ ವಿಷಾದ ರಾಗದ ಗಂಭೀರ ಮೌನ ನಮ್ಮನ್ನು ಕಾಡುತ್ತದೆ...' ಎನ್ನುವ ಸಾಲುಗಳೇ ರೂಪಶ್ರೀಯವರ ಕವಿತೆಗಳು ಹೇಗಿರುತ್ತವೆ ಎನ್ನುವುದನ್ನು ಹೇಳುತ್ತವೆ.
ಈ ಪುಸ್ತಕ 64 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ