ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತೊಂದನೇ ಪ್ರಕಟಣೆ - ಮೌನಮೋಹಿ

ಸದ್ಯ ಕನ್ನಡ ಸಿನಿಮಾ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಟಿ.ಜಿ.ನಂದೀಶ್ ತೀರ್ಥಹಳ್ಳಿ ಅವರ ಮೊದಲನೇ ಕವನ ಸಂಕಲನ 'ಮೌನಮೋಹಿ'.
ಮೊದಲಿನಿಂದಲೂ ಬರವಣಿಗೆಯ ಹುಚ್ಚು ಹತ್ತಿಸಿಕೊಂಡಿರುವ ನಂದೀಶ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬರೆದ ಕವನಗಳನ್ನು ಒಂದೆಡೆ ಕೂಡಿಟ್ಟು, ನಂತರ ಅದನ್ನು 'ಮೌನಮೋಹಿ'ಯಾಗಿಸಿ ಓದುಗರ ಕೈಗಿಟ್ಟ ನಂದೀಶ್ ಕನ್ನಡದ ಭರವಸೆಯ ಕವಿ. ಇವರ ಈ ಸಂಕಲನದಲ್ಲಿ ಒಟ್ಟು 34 ಕವಿತೆಗಳಿವೆ. ಇದಕ್ಕೆ ಡಾ.ಆಜಾದ್ ಐ.ಎಸ್ ಬೆನ್ನುಡಿ ಬರೆದಿದ್ದರೆ, ನಂದೀಶ್ ಅವರ ಗುರುಗಳಾದ ಬಿ.ಆರುಣ್ ಕುಮಾರ‍್ ಅವರು ಮುನ್ನುಡಿ ಬರೆದಿದ್ದಾರೆ. ಬಿ.ಅರುಣ್ ಕುಮಾರ‍್ ಅವರು ಮುನ್ನುಡಿಯಲ್ಲಿ ಬರೆದ 'ಕೆಲವೊಂದು ಪ್ರಾಸಯುಕ್ತ ಸಾಲುಗಳನ್ನೇ ಪದ್ಯಗಳೆಂದು ಭ್ರಮಿಸುವ ಜನರ ಮಧ್ಯೆ ಪದ್ಯವೆಂದರೆ ಕೇವಲ ಭಾಷಾ ಚಮತ್ಕಾರವಷ್ಟೇ ಅಲ್ಲ. ಅದು ಮನಸ್ಸಿನೊಳಗಣ ಭಾವನೆಗಳಿಗೆ ರೂಪ ಕೊಡುವ ಕ್ರಿಯೆ ಎನ್ನುವ ಕವಿಯ ಬದ್ಧತೆ ಇಷ್ಟವಾಗುತ್ತದೆ' ಎನ್ನುವ ಸಾಲುಗಳು ನಂದೀಶ್ ಅವರ ಕವಿತೆಯ ಶಕ್ತಿ ಎಂತಹದ್ದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತದೆ.
ಈ ಪುಸ್ತಕ 60 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 40 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ