ಗುರುವಾರ, ಫೆಬ್ರವರಿ 13, 2014

ನಮ್ಮ ಹದಿನೈದನೇ ಪ್ರಕಟಣೆ - ನಿಮ್ಮ ಮಕ್ಕಳ ಮನಸ್ಸು ನಿಮಗೆಷ್ಟು ಗೊತ್ತು?

ಆರ‍್.ಟಿ.ಶಾಕುಂತಲಾ ನರೇಶ್ ಅವರು ಬರೆದಿರುವ ಮಕ್ಕಳ ಮನಸ್ಸಿನ ಒಳಗುಟ್ಟನ್ನು ಆತ್ಮೀಯ ಶೈಲಿಯಲ್ಲಿ ತೆರೆದಿಡುವ ಪುಸ್ತಕ 'ನಿಮ್ಮ ಮಕ್ಕಳ ಮನಸ್ಸು ನಿಮಗೆಷ್ಟು ಗೊತ್ತು?'
ಖಾಸಗಿ ಸಂಸ್ಥೆಯೊಂದರಲ್ಲಿ ಸಲಹಾಗಾರರಾಗಿ ಕೆಲಸ ಮಾಡುತ್ತಿರುವ ಆರ‍್.ಟಿ.ಶಾಕುಂತಲಾ ನರೇಶ್ ಅವರು ಮಕ್ಕಳ ಮನಸ್ಸನ್ನು ಈ ಪುಸ್ತಕದಲ್ಲಿ ಸಾಧ್ಯವಾದಷ್ಟು ಸೆರೆ ಹಿಡಿದಿಡಲು ಪ್ರಯತ್ನಿಸಿದ್ದಾರೆ. 'ಮಕ್ಕಳು ನಿಮ್ಮ ಮಾತೇಕೆ ಕೇಳುವುದಿಲ್ಲ?', 'ಬುದ್ಧಿಮಾಂದ್ಯ ಮಗು ಯಾಕೆ ಹುಟ್ಟುತ್ತದೆ?','ಮಗುವಿನ ಬೆಳವಣಿಗೆಗೆ ನೀವೆಷ್ಟು ಟೈಮ್ ಕೊಡುತ್ತೀರಿ?', 'ಮಕ್ಕಳು ಮಾಡಿದ್ದಕ್ಕೆಲ್ಲ ನಗುತ್ತೀರಾ?' ಇಂತಹ ಹತ್ತು ಹಲವು ಲೇಖನಗಳನ್ನೊಳಗೊಂಡ ಅಪರೂಪದ ಸಂಕಲನ ಇದಾಗಿದೆ. ಇದನ್ನು ಒಮ್ಮೆ ಓದಿದರೆ ಇಷ್ಟು ದಿನ ನೀವು ನಿಮ್ಮ ಮಗುವಿನೊಂದಿಗೆ ನಡೆದುಕೊಂಡ ರೀತಿಗೂ, ಇನ್ನು ಮುಂದೆ ನಡೆದುಕೊಳ್ಳುವ ರೀತಿಯಲ್ಲೂ ಸಾಕಷ್ಟು ವ್ಯತ್ಯಾಸವನ್ನು ನೀವೇ ಕಂಡುಕೊಳ್ಳಬಹುದಾಗಿದೆ.
ಈ ಪುಸ್ತಕ 104 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 60 ರೂಪಾಯಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ