ಶುಕ್ರವಾರ, ಫೆಬ್ರವರಿ 14, 2014

ನಮ್ಮ ಇಪ್ಪತ್ತ್ನಾಲ್ಕನೇ ಪ್ರಕಟಣೆ -ಪಂಚಾಚಾರ ಪ್ರಭೆ

ಬಸವಣ್ಣನ ಸೇರಿದಂತೆ ಪ್ರಮುಖ ವಚನಕಾರರ ವಚನಗಳಿಗೆ ತಮ್ಮದೇ ರೀತಿಯಲ್ಲಿ ಹೊಸ ಬಗೆಯ ವಾಖ್ಯಾನಗಳನ್ನು ಬರೆದು ಅದಕ್ಕೆ 'ಪಂಚಾಚಾರ ಪ್ರಭೆ' ಎನ್ನುವ ಹೆಸರಿಟ್ಟವರು ಶಿವಸ್ವಾಮಿ ಚೀನಕೇರಿ.
ವಚನಗಳನ್ನು ಹೊಸ ಬಗೆಯಲ್ಲಿ ನೋಡುವ ಪ್ರಯತ್ನವನ್ನು ನಡೆಸಿರುವ ಶಿವಸ್ವಾಮಿ ಚೀನಕೇರಿಯವರು ಈಗಾಗಲೇ ವಚನಗಳಿಗೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದು,ಅವರ ಹೊಸ ಪುಸ್ತಕವೇ ಪಂಚಾಚಾರ ಪ್ರಭೆ. ಈ ಪುಸ್ತಕಕ್ಕೆ ವೀರಶೆಟ್ಟಿ ಬಿ.ಗಾರಂಪಳ್ಳಿಯವರು ಬೆನ್ನುಡಿ ಬರೆದಿದ್ದರೆ, ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವಗಂಗಾ ರುಮ್ಮ ಅವರು ಮುನ್ನುಡಿ ಬರೆದಿದ್ದಾರೆ. ಮುನ್ನುಡಿಯಲ್ಲಿ ಶಿವಗಂಗಾ ರುಮ್ಮ ಅವರು ಬರೆದಿರುವ 'ಶ್ರೀಯುತ ಶಿವಸ್ವಾಮಿ ಚೀನಕೇರಿಯವರು ವಚನ ಚಳುವಳಿಯನ್ನು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ಮಾಡಲು ಓದುಗರಿಗೆ ಈ ಪುಸ್ತಕದ ಮುಖಾಂತರ ಪ್ರೇರಣೆ ನೀಡುತ್ತಾರೆ... ಶಿವಸ್ವಾಮಿ ಚೀನಕೇರಿಯಂತಹವರು ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಓದು ಬರಹ ನಡೆಸಿದ್ದೇ ಆದಲ್ಲಿ ಅವರೊಬ್ಬ ವಸ್ತುನಿಷ್ಠ ಬರಹಗಾರರಾಗಿ ಹೊರಹೊಮ್ಮುವುದರಲ್ಲಿ ಆಶ್ಚರ್ಯವಿಲ್ಲ' ಎನ್ನುವ ಮಾತುಗಳು ಈ ಪುಸ್ತಕದ ಒಳಗನ್ನು ತೆರೆದಿಡುತ್ತದೆ.
ಈ ಪುಸ್ತಕ 132 ಪುಟಗಳಲ್ಲಿ ಮುದ್ರಣಗೊಂಡಿದ್ದು, ಬೆಲೆ 85 ರೂಪಾಯಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ